ಚಾಮರಾಜನಗರ: ಪಠ್ಯ ಪುಸ್ತಕ ಪರಿಷ್ಕರಣೆಗೆ ಸಾಹಿತಿ ಕುಂ.ವೀರಭದ್ರಪ್ಪ (Kum Veerabhadrappa) ಬೆಂಬಲ ಸೂಚಿಸಿದ್ದಾರೆ. ಹಿಂದಿನ ಸರ್ಕಾರ ಪಠ್ಯ ಪುಸ್ತಕದಲ್ಲಿ ಭಾರಿ ಲೋಪ ಎಸಗಿದೆ. ಬಿಜೆಪಿ ಸರ್ಕಾರ ಹುಸಿ ದೇಶಭಕ್ತರನ್ನು ಬಿಂಬಿಸಲು ಯತ್ನಿಸಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿನ ತಪ್ಪನ್ನು ಸರಿಪಡಿಸಬೇಕು. ಹೊಸ ಪಠ್ಯ ಪುಸ್ತಕ ಜಾರಿಗೆ ತರಬೇಕು.
ಬರಗೂರು ರಾಮಚಂದ್ರಪ್ಪ ಜಾರಿಗೆ ತಂದಿದ್ದ ಪುಸ್ತಕ ಮತ್ತೆ ಬರಬೇಕು. ಬಿಜೆಪಿಯವರು ಹೇಳುವುದು ಭಾರತೀಯತೆ ಅಲ್ಲ, ಹಿಂದೂಯತೆ. ದೇಶದ ಎಲ್ಲರ ಹಿತಾಸಕ್ತಿ ಕಾಪಾಡುವುದು ನಿಜವಾದ ಭಾರತೀಯತೆ. ಬಿಜೆಪಿಯವರು ಹೇಳುವ ಭಾರತೀಯತೆ ಒಪ್ಪುವುದಕ್ಕೆ ಸಾಧ್ಯವಿಲ್ಲ. ಬಿಜೆಪಿಯವರು ಹೇಳುವುದು ಆರ್ಎಸ್ಎಸ್ ಪ್ರಣೀತ ಭಾರತೀಯತೆ ಎಂದರು.