ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಗೆ ಸದ್ಯ 58 ವರ್ಷ ವಯಸ್ಸು. ಸಲ್ಮಾನ್ ಖಾನ್ ಯಾವಾಗ ಮದುವೆಯಾಗುತ್ತಾರೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ. ಸಲ್ಮಾನ್ ಜೀವನದಲ್ಲಿ ಹಲವು ಹುಡುಗಿಯರು ಬಂದು ಹೋಗಿದ್ದರು ಯಾರು ಕೂಡ ಮದುವೆಯಾಗೋ ಮನಸ್ಸು ಮಾಡಲಿಲ್ಲ. ಸಲ್ಮಾನ್ ಖಾನ್ ಯಾಕೆ ಮದುವೆಯಾಗುತ್ತಿಲ್ಲ ಎಂದು ಪ್ರಶ್ನೆಗೆ ಇದೀಗ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಉತ್ತರಿಸಿದ್ದಾರೆ.
ನಟ ಸಲ್ಮಾನ್ ಖಾನ್ ಅವರು ತಮ್ಮ ಡೇಟಿಂಗ್ ವದಂತಿಗಳ ಕಾರಣದಿಂದ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ನಟ ಸಲ್ಮಾನ್ ಖಾನ್ 58 ವರ್ಷ ವಯಸ್ಸಾದರೂ ಕೂಡ ಮದುವೆಯಾಗದೆ ಉಳಿದಿರುವ ಕಾರಣವನ್ನು ಸಲೀಂ ಖಾನ್ ಇದೀಗ ಬಿಚ್ಚಿಟ್ಟಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಟ ಸಲ್ಮಾನ್ ಖಾನ್ ಅವರ ತಂದೆ ತಮ್ಮ ಮಗ ಇನ್ನೂ ಮದುವೆಯಾಗದೆ ಉಳಿದಿರಲು ಕಾರಣ ಏನು ಎಂಬುದನ್ನು ರಿವೀಲ್ ಮಾಡಿದ್ದಾರೆ.
ಸಲ್ಮಾನ್ ಖಾನ್ ಮಗ್ದ ಮನಸ್ಸಿನವನು. ಅವನು ಸುಲಭವಾಗಿ ಸಂಬಂಧದ ಒಳಗೆ ಪ್ರವೇಶಿಸುತ್ತಾನೆ ಆದರೆ ಅವನಿಗೆ ಮದುವೆಯಾಗಲು ಧೈರ್ಯವಿಲ್ಲ. ಏಕೆಂದರೆ ನನ್ನ ಮಗ ತುಂಬಾ ಸರಳ ಸ್ವಭಾವವನ್ನು ಹೊಂದಿದ್ದಾನೆ ಮತ್ತು ಅತೀ ಬೇಗನೆ ಎಲ್ಲರ ಕಡೆಗೆ ಆಕರ್ಷಿತನಾಗುತ್ತಾನೆ. ತಾನು ಮದುವೆಯಾಗುವ ಹೆಣ್ಣು ತನ್ನ ತಾಯಿಯಂತೆ ಕುಟುಂಬವನ್ನು ನಿರ್ವಹಿಸಬಹುದೇ ಎಂಬ ಅನುಮಾನ ಅವನಿಗೆ ಸದಾ ಇದ್ದೇ ಇರುತ್ತದೆ. ಅವನು ತನ್ನ ಪತ್ನಿ ತನ್ನ ತಾಯಿಯಂತೆ ಪತ್ನಿ ಮಕ್ಕಳನ್ನು ನೋಡಿಕೊಳ್ಳಬೇಕು ಹಾಗೂ ಮಕ್ಕಳಿಗೆ ಊಟವನ್ನು ಬೇಯಿಸಬೇಕು, ಅವರು ತಯಾರಾಗಲು ಸಹಾಯ ಮಾಡಬೇಕು, ಮನೆಕೆಲಸವನ್ನು ಮಾಡಿಕೊಂಡು ಹೋಗಬೇಕು ಎಂದು ಬಯಸುತ್ತಾನೆ. ಇಂದಿನ ಕಾಲದಲ್ಲಿ ಇದು ಸುಲಭವಲ್ಲ” ಎಂದಿದ್ದಾರೆ.
ಇಷ್ಟು ವರ್ಷಗಳಲ್ಲಿ ನಟ ಸಲ್ಮಾನ್ ಖಾನ್ ಅವರು ಸೋಮಿ ಅಲಿ, ಸಂಗೀತ ಬಿಜಲಾನಿ, ಐಶ್ವರ್ಯ ರೈ, ಕತ್ರೀನಾ ಕೈಫ್, ಯೂಲಿಯಾ ವಂತೂರ್ ಅವರ ಜೊತೆ ಸಂಬಂಧ ಹೊಂದಿದ್ದರಾದರೂ, ಇವರ್ಯಾರನ್ನು ಕೂಡ ಸಲ್ಮಾನ್ ಖಾನ್ ಮದುವೆಯಾಗಿಲ್ಲ. ಇದೀಗ ಸಲ್ಮಾನ್ ಖಾನ್ ಅವರು ಮದುವೆಯಾಗದೆ ಉಳಿದ ಹಿಂದಿನ ಸತ್ಯವನ್ನು ತಂದೆ ಬಿಚ್ಚಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.