ಟಾಲಿವುಡ್ ಬ್ಯೂಟಿ ನಟಿ ಸಮಂತಾ ಬಾತ್ಟಬ್ನಲ್ಲಿ ಕುಳಿತಿರುವ ನಗ್ನ ಫೋಟೋವೊಂದು ಕೆಲ ದಿನಗಳ ಹಿಂದೆ ವೈರಲ್ ಆಗಿದ್ದು, ಚಿತ್ರ ಶೇರ್ ಆದ ಕೊಂಚ ಹೊತ್ತಲ್ಲೇ ಡಿಲೀಟ್ ಆಗಿತ್ತು. ಸಮಂತಾ ಫ್ಯಾನ್ಸ್ ಇದನ್ನು ನಕಲಿ ಎನ್ನುತ್ತಿದ್ದರು. ಇದೀಗ ನಟಿ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
‘ನಿಮ್ಮನ್ನು ನೀವು ಸಾಬೀತುಪಡಿಸುವ ಅಗತ್ಯ ಇಲ್ಲದೇ ಅಥವಾ ಸ್ಪಷ್ಟನೆ ನೀಡುವ ಅಗತ್ಯ ಇಲ್ಲದೇ ಬದುಕುವುದೇ ನಿಜವಾದ ಸಾಧನೆ’ ಎಂಬರ್ಥ ಬರುವಂತಹ ಕೋಟ್ ಇದಾಗಿದೆ. ಆ ಮೂಲಕ, ತಾವು ಇಂಥದ್ದಕ್ಕೆಲ್ಲ ಪ್ರತಿಕ್ರಿಯೆ, ಸ್ಪಷ್ಟನೆ ನೀಡುವುದಿಲ್ಲ ಎಂಬುದನ್ನು ನಟಿ ತಿಳಿಸಿದ್ದಾರೆ.
ಮಾರ್ಫ್ ಮಾಡಿದ ಅರೆ ಬೆತ್ತಲೆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟು, ಅದು ಸಮಂತಾ ಅವರ ಫೋಟೋ ಎಂದು ಕಿಡಿಗೇಡಿಗಳು ಅಪಪ್ರಚಾರ ಮಾಡಿದ್ದರು. ಅದರ ಬೆನ್ನಲ್ಲೇ ಸಮಂತಾ ಅವರು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಒಂದು ಕೋಟ್ ಹಂಚಿಕೊಂಡಿದ್ದಾರೆ. ‘ನಿಮ್ಮನ್ನು ನೀವು ಸಾಬೀತುಪಡಿಸುವ ಅಗತ್ಯ ಇಲ್ಲದೇ ಅಥವಾ ಸ್ಪಷ್ಟನೆ ನೀಡುವ ಅಗತ್ಯ ಇಲ್ಲದೇ ಬದುಕುವುದೇ ನಿಜವಾದ ಸಾಧನೆ’ ಎಂಬರ್ಥ ಬರುವಂತಹ ಕೋಟ್ ಇದಾಗಿದೆ. ಆ ಮೂಲಕ, ತಾವು ಇಂಥದ್ದಕ್ಕೆಲ್ಲ ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.
ಇನ್ನು ಸಮಂತಾ ಅವರು, ಪತಿ ನಾಗ ಚೈತನ್ಯ ಅವರ ಬೇರ್ಪಡಿಕೆಯಿಂದ ಸುದ್ದಿಯಲ್ಲಿದ್ದಾರೆ. ಆದರೆ ಮದುವೆಯಾಗಿ ನಾಲ್ಕೇ ವರ್ಷಕ್ಕೆ ದಾಂಪತ್ಯ ಜೀವನ ಕೊನೆಗೊಳಿಸಿತು ಈ ಜೋಡಿ. 2020ರಲ್ಲಿ ಇಬ್ಬರೂ ವಿಚ್ಛೇದನ ಪಡೆದಿದ್ದು ಇದಾಗಲೇ ನಾಲ್ಕು ವರ್ಷಗಳಾಗುತ್ತಾ ಬಂದಿದೆ. ಆದರೆ ಇವರ ಡಿವೋರ್ಸ್ ಸುದ್ದಿ ಮಾತ್ರ ಇಂದಿಗೂ ಸದ್ದು ಮಾಡುತ್ತಲೇ ಇದೆ. ಟಾಲಿವುಡ್ ಸ್ಟಾರ್ ನಾಗಚೈತನ್ಯ, ಸಮಂತಾ ಅವರಿಂದ ದೂರ ಆದ ಬಳಿಕ ಡೇಟಿಂಗ್ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ಸಮಂತಾ ಅವರಿಂದ ವಿಚ್ಛೇದನ ಪಡೆದ ಬಳಿಕ ನಾಗ ಚೈತನ್ಯ ಮತ್ತೋರ್ವ ನಟಿ ಶೋಭಿತಾ ಜೊತೆ ಪ್ರೀತಿಯಲ್ಲಿ ಬಿದ್ದಾರೆ ಎನ್ನುವ ಸುದ್ದಿ ಕೇಳಿ ಬರ್ತಿದೆ. ಇತ್ತ ನಟಿ ಸಮಂತಾ ಸಿನಿಮಾ ಹಾಗೂ ಟ್ರಾವೆಲಿಂಗ್ ನಲ್ಲಿ ತೊಡಿಗಿಕೊಂಡಿದ್ದಾರೆ.