ಟಾಲಿವುಡ್ ಹೀರೋ ವಿಜಯ್ ದೇವರಕೊಂಡ (Vijay Devarakonda) ಅವರು ರಶ್ಮಿಕಾ ಮಂದಣ್ಣ (Rashmika Mandanna) ಬಿಟ್ಟು ಸಮಂತಾ ನನ್ನ ಕ್ರಶ್ ಎಂದು ಹೇಳುವ ಮೂಲಕ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದ್ದಾರೆ. ಖುಷಿ ಸಿನಿಮಾದ ಸಹನಟಿ ಸಮಂತಾ(Samantha) ಬಗ್ಗೆ ಅಚ್ಚರಿ ಹೇಳಿಕೆಯೊಂದನ್ನ ವಿಜಯ್ ಬಿಚ್ಚಿಟ್ಟಿದ್ದಾರೆ̤
ಸಮಂತಾ ಸದ್ಯ ಆರೋಗ್ಯಕ್ಕಾಗಿ ಲಾಂಗ್ ಬ್ರೇಕ್ ತೆಗೆದುಕೊಂಡಿದ್ದಾರೆ. ‘ಖುಷಿ’ (Kushi) ಸಿನಿಮಾ ಮುಗಿಸಿಕೊಟ್ಟು, ಮೈಯೋಸಿಟೀಸ್ ಕಾಯಿಲೆಗೆ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಿರುವಾಗ ಚಿತ್ರತಂಡದ ಜೊತೆ ಸೇರಿ ವಿಜಯ್ ದೇವರಕೊಂಡ ಖುಷಿ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.
ಖುಷಿ ಸಿನಿಮಾದ ಟ್ರೈಲರ್ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಈ ಬೆನ್ನಲ್ಲೇ ಸಂದರ್ಶನವೊಂದರಲ್ಲಿ ವಿಜಯ್, ಮದುವೆ ಬಗ್ಗೆ ಮಾತನಾಡುವಾಗ ಸಮಂತಾ ನನ್ನ ಕ್ರಶ್ ಎಂದು ಹೇಳಿಕೆ ನೀಡಿದ್ದಾರೆ. ವಿಜಯ್ ಹೇಳಿಕೆಗೆ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. ವಿಜಯ್- ರಶ್ಮಿಕಾ ಮಂದಣ್ಣ ಡೇಟಿಂಗ್ ಕಹಾನಿ ಬಗ್ಗೆ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಇಬ್ಬರು ಕದ್ದು ಮುಚ್ಚಿ ಆಗಾಗ ಭೇಟಿಯಾಗುತ್ತಿರುತ್ತಾರೆ.