ಹಲವು ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಸಮಂತಾ ಹಾಗೂ ನಾಗಚೈತನ್ಯ ಮದುವೆಯಾದ ನಾಲ್ಕೇ ವರ್ಷಕ್ಕೆ ದೂರ ದೂರವಾಗಿದ್ದರು. ಇಂದಿಗೂ ಇಬ್ಬರು ದೂರವಾಗಲು ಕಾರಣ ಮಾತ್ರ ಸ್ಪಷ್ಟವಾಗಿಲ್ಲ. ಈ ಮಧ್ಯೆ ನಾಗಚೈತನ್ಯ ನಟಿ ಶೋಭಿತಾ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಅತ್ತ ಸಮಂತಾ ಮಾತ್ರ ಡಿವೋರ್ಸ್ ಬಳಿಕ ಒಂಟಿಯಾಗಿದ್ದಾರೆ ಎನ್ನಲಾಗುತ್ತಿದೆ. ಆದರೀಗ ಒಂಟಿಯಾಗಿರುವ ನಟಿ ಸಮಂತಾ ನಿರ್ದೇಶಕನೋರ್ವನ ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಯೊಂದು ಟಾಲಿವುಡ್ ಅಂಗಳದಲ್ಲಿ ಕೇಳಿ ಬರ್ತಿದೆ.
ನಿರ್ದೇಶಕ ರಾಜ್ ನಿಡಿಮೋರ್ ಜೊತೆಗೆ ನಟಿ ಸಮಂತಾ ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವೆಬ್ ಸೀರಿಸ್ನಲ್ಲಿ ಜೊತೆಯಾದ ನಂತರದಿಂದ ಸಮಂತಾ ಆತನ ಜೊತೆಗೆ ಡೇಟ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ ಗಾಳಿ ಸುದ್ದಿಗೆ ನಟಿಯ ಕಡೆಯಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ.
ಸಮಂತಾ ಅವರು ‘ದಿ ಫ್ಯಾಮಿಲಿ ಮ್ಯಾನ್ 2’ ಸಿನಿಮಾದಲ್ಲಿ ಅಸಾಧಾರಣ ಅಭಿನಯಕ್ಕಾಗಿ ಸಾಕಷ್ಟು ಮೆಚ್ಚುಗೆ ಮತ್ತು ಪ್ರಶಂಸೆಯನ್ನು ಗಳಿಸಿದರು. ಹನಿ ಬನ್ನಿಯಲ್ಲಿ ರಾಜ್ ನಿಡಿಮೋರ್ ಪರಿಚಯವಾಗಿ ಸದ್ಯ ಡೇಟ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ ರಾಜ್ಗೆ ಈಗಾಗಲೇ ಮದುವೆಯಾಗಿದೆ. ಹೀಗಾಗಿ ಡೇಟಿಂಗ್ ಸುದ್ದಿಗೆ ಸ್ಪಷ್ಟನೆ ಸಿಗುವವರೆಗೂ ಕಾಯಬೇಕಿದೆ.