ಥಾಯ್ಲೆಂಡ್ನಲ್ಲಿ ವಿವಾಹ ಸಮಾನತೆಯ ಮಸೂದೆಗೆ ಅಂಗೀಕಾರ ನೀಡಲಾಗಿದೆ. ಈ ಮೂಲಕ ಸಲಿಂಗ ವಿವಾಹ ಕಾನೂನುಬದ್ಧಗೊಂಡಿದೆ.
ಇಲ್ಲಿನ ದೊರೆ ಮಹಾ ವಾಜಿರಾಲೊಂಗ್ಕೊರ್ನ್ ಅನುಮೋದನೆ ಬಳಿಕ ಈ ಕಾನೂನನ್ನು ರಾಯಲ್ ಗೆಜೆಟ್ನಲ್ಲಿ ಪ್ರಕಟಿಸಲಾಗಿದ್ದು, ಮುಂದಿನ 120 ದಿನಗಳಲ್ಲಿ ಇದು ಜಾರಿಗೆ ಬರಲಿದೆ. ಮುಂದಿನ ಜನವರಿಯಿಂದ ಸಲಿಂಗ ದಂಪತಿ ತಮ್ಮ ವಿವಾಹ ನೋಂದಣಿ ಮಾಡಿಕೊಳ್ಳಬಹುದಾಗಿದೆ.