ವಿಜಯನಗರ: ಮೈಲಾರಲಿಂಗೇಶ್ವರ ದೇವರ ಕಾರ್ಣಿಕ ಅಂದ್ರೆ ವರ್ಷದ ಭವಿಷ್ಯವಾಣಿ ಅಂತಲೆ ಫೇಮಸ್. ಭರತ ಹುಣ್ಣಿಮೆಯಾಗಿ ಮೂರು ದಿನಕ್ಕೆ ನಡೆಯುವ ವರ್ಷದ ದೈವವಾಣಿ ಕೇಳಲು ಲಕ್ಷಾಂತರ ಜನರು ಇಲ್ಲಿಗೆ ಆಗಮಿಸುತ್ತಾರೆ. ಸುಕ್ಷೇತ್ರ ಮೈಲಾರೇಶನ ಪ್ರಸಕ್ತ ವರ್ಷದ ಕಾರಣಿಕ ನಿಜವಾಗಿದೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ನುಡಿಯಲಾಗಿದ್ದ “ಸಂಪಾಯಿತಲೆ ಪರಾಕ್” ಎಂಬ ಭವಿಷ್ಯವಾಣಿಯಂತೆ ರಾಜ್ಯದ ತುಂಬೆಲ್ಲ ಮಳೆ ಸುರಿಯುತ್ತಿದೆ.
ಕಾರಣಿಕದ ಅರ್ಥದಂತೆ ಈ ವರ್ಷ ಕೆರೆ-ಕಟ್ಟೆ,ನದಿ-ಹಳ್ಳಗಳೆಲ್ಲ ಭೋರ್ಗರೆಯುತ್ತಿವೆ. ಈ ಬಾರಿ ಹಾಕಿದ ಬೆಳೆಗಳೆಲ್ಲ ಸಮೃದ್ಧಿಯಾಗಿ ಬೆಳೆದು ನಿಂತಿವೆ ಎಂದು ಭಕ್ತರು ಅರ್ಥೈಸುತ್ತಿದ್ದಾರೆ.ಗೊರವಯ್ಯ ರಾಮಪ್ಪ ದೇವರ ಆಣತಿಯಂತೆ ಬಿಲ್ಲನ್ನೇರಿ ವರ್ಷದ ಭವಿಷ್ಯ ನುಡಿದಿದ್ದರು. ಅವೆರು ಹೇಳಿದಂತೆ ಕಾರಣಿಕ ನುಡಿ ನಿಜವಾಗಿದ್ದಕ್ಕೆ ರೈತಾಪಿ ವರ್ಗ ಹಾಗೂ ಭಕ್ತಗಣ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.