ಸ್ಯಾಂಡಲ್ ವುಡ್ ವಿರುದ್ಧ ರೈತರ ಆಕ್ರೋಶ ಭುಗಿಲೆದ್ದಿದೆ. ನಟರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಧಿಕ್ಕಾರದ ಪೋಸ್ಟ್ ಹೆಚ್ಚಾಗಿದೆ.
ಕಾವೇರಿ ಹೋರಾಟಕ್ಕೆ ಬೆಂಬಲ ನೀಡದ ಹಿನ್ನೆಲೆ, ಚಿತ್ರ ನಟರ ವಿರುದ್ಧ ಮಂಡ್ಯ ರೈತರು ಆಕ್ರೋಶ ಹೊರ ಹಾಕಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ಅನ್ನದಾತರ ರೋಷಾವೇಷ ಹೆಚ್ಚಾಗಿದೆ. ಕಾವೇರಿ ಬಗ್ಗೆ ಧ್ವನಿ ಎತ್ತದ ಕನ್ನಡ ಚಲನಚಿತ್ರ ನಟರಿಗೆ ಧಿಕ್ಕಾರ ಧಿಕ್ಕಾರ ಎಂದು ಫೇಸ್ಬುಕ್, ವಾಟ್ಸ್ ಆಪ್ ಸೇರಿದಂತೆ ವಿವಿಧ ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡಲಾಗಿದೆ. ಪ್ರಮುಖ ನಟರ ಫೋಟೋ ಹಾಕಿ, ನಟರ ಬಾಯಿಗೆ ಪಟ್ಟಿ ಅಂಟಿಸಿ ಕಿಡಿಕಾರಿದ್ದಾರೆ.
ಕಾವೇರಿ ಬಗ್ಗೆ ಧ್ವನಿ ಎತ್ತದ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಡಾ.ರಾಜ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಅವರ ಸ್ಮರಣೆ ಮಾಡುತ್ತಾ, ಕನ್ನಡ ನಾಡಿನ ರೈತರಿಗೆ ಅನ್ಯಾಯ ಆದಾಗ ಮುನ್ನುಗ್ಗಿ ಬರುವ ಶಕ್ತಿ ಅವರಿಗಿತ್ತು ಎಂದು ಸ್ಮರಣೆ ಮಾಡಿದ್ದಾರೆ.
ಇಂದು ಯಾವ ನಟರೂ ಕಾವೇರಿ ಬಗ್ಗೆ ಧ್ವನಿ ಎತ್ತದೇ ಇರೋದು ಬಹಳ ನೋವಿನ ಸಂಗತಿ.ನಮ್ಮಿಂದ ನಟರೇ ಹೊರತು, ನಟರಿಂದ ನಾವಲ್ಲ ಅನ್ನೋ ಸತ್ಯ ಅರಿಯಬೇಕು. ಇಂತಹ ನಿರ್ಲಕ್ಷ್ಯ ನಟರನ್ನ ನಂಬದೆ ಎಲ್ಲಾ ಕನ್ನಡಿಗರು ರೈತರ ಪರ ನಿಲ್ಲಬೇಕು. ರೈತ ಉಳಿದರೆ ನಾವೆಲ್ಲ, ರೈತನಿಲ್ಲದೆ ಜಗವಿಲ್ಲ. ನಮ್ಮ ನಿರಂತರ ಹೋರಾಟ ಕಾವೇರಿಗಾಗಿ ಎಂದು ಪೋಸ್ಟ್ ಮಾಡಲಾಗಿದೆ.