ಸ್ಯಾಂಡಲ್ವುಡ್ನ ಮೋಹಕ ತಾರೆ ನಟಿ ರಮ್ಯಾ ಚಿಕಿತ್ಸೆಗಾಗಿ ಲಂಡನ್ ಗೆ ಹಾರಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದು ನಟಿಗೆ ಏನಾಗಿದೆ ಎಂದು ಆತಂಕಗೊಂಡಿದ್ದಾರೆ. ಅಂದ ಹಾಗೆ ನಟಿ ರಮ್ಯಾ ಲಂಡನ್ ಗೆ ತೆರಳಿರುವುದು ಯಾವ ಕಾರಣಕ್ಕೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.
ಸಾಕಷ್ಟು ವರ್ಷಗಳ ಕಾಲ ಸಿನಿಮಾ ರಂಗದಿಂದ ದೂರವಿದ್ದ ನಟಿ ರಮ್ಯಾ ಏಕಾಏಕಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಅಭಿಮಾನಿಗಳ ದಿಲ್ ಖುಷ್ ಗೊಳಿಸಿದ್ದರು. ನಿರ್ಮಾಣದ ಜೊತೆ ಜೊತೆಗೆ ನಟಿಯಾಗಿಯೂ ಬಣ್ಣ ಹಚ್ಚಲು ರಮ್ಯಾ ರೆಡಿಯಾಗಿದ್ದಾರೆ.
ಸದ್ಯದಲ್ಲೇ ನಟಿ ರಮ್ಯಾ ಡಾಲಿ ಧನಂಜಯ್ ನಟನೆಯ ಉತ್ತರ ಕಾಂಡ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸುವ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಲು ರೆಡಿಯಾಗಿದ್ದಾರೆ. ಹೀಗಾಗಿ ನೈಸರ್ಗಿಕ ಚಿಕಿತ್ಸೆ ಪಡೆಯಲು ಲಂಡನ್ ಗೆ ತೆರಳಿದ್ದಾರೆ. ಮುಖದಲ್ಲಿ ಮತ್ತಷ್ಟು ಕಾಂತಿ ಹೆಚ್ಚಿಸಿಕೊಂಡು ಸಖತ್ ಸ್ಲಿಮ್ ಆಗಲು ನಟಿ ಲಂಡನ್ ಗೆ ತೆರಳಿದ್ದಾರೆ.