ಸ್ಯಾಂಡಲ್ ವುಡ್ ನ ಸಾಕಷ್ಟು ನಟಿಯರಿಗೆ ಈ ವರ್ಷ ತುಂಬಾ ವಿಶೇಷವಾಗಿದೆ. ಸಾಕಷ್ಟು ನಟಿಯರು ಅಮ್ಮಂದಿರಾಗುತ್ತಿದ್ದಾರೆ. ಸಿನಿಮಾ ಅಲ್ಲದೇ ಸೀರಿಯಲ್ ನಟಿಯರಲ್ಲಿ ಲಕ್ಷ್ಮಿಬಾರಮ್ಮ ಖ್ಯಾತಿಯ ನಟಿ ಚಿನ್ನು ಮತ್ತು ಗೊಂಬೆ ಕೂಡ ಅಮ್ಮನಾಗುವ ಸಂಭ್ರಮದಲ್ಲಿದ್ದಾರೆ.
ಲಕ್ಷ್ಮಿಬಾರಮ್ಮ ಧಾರವಾಹಿಯಲ್ಲಿ ಗೊಂಬೆ ಪಾತ್ರದಲ್ಲಿ ನೇಹಾ ಗೌಡ ಹಾಗೂ ಲಚ್ಚಿ ಪಾತ್ರದಲ್ಲಿ ಕವಿತಾ ಗೌಡ ಕಾಣಿಸಿಕೊಮಡಿದ್ದರು ಇದೀಗ ಈ ಸ್ನೇಹಿತೆಯರು ಅಮ್ಮ ಆಗುತ್ತಿರೋ ಖುಷಿಯಲ್ಲಿದ್ದಾರೆ. ಒಟ್ಟಿಗೆ ಗರ್ಭಿಣಿ ಆಗಿರೋ ಈ ಸ್ನೇಹಿತರು ಪರಸ್ಪರ ಶುಭಾಶಯ ಹೇಳಿಕೊಂಡಿದ್ದಾರೆ.
ನೇಹಾ ಗೌಡ ಹಾಗೂ ಕವಿತಾ ಗೌಡ ಅವರಿಗೆ ಒಟ್ಟಿಗೆ ಸೀಮಂತ ಮಾಡಿದಂತೆ ಇದೆ. ಅನುಬಂಧ ಅವಾರ್ಡ್ಸ್ಕಾರ್ಯಕ್ರಮದಲ್ಲಿ ಇಬ್ಬರು ಒಟ್ಟಿಗೆ ಕ್ಯಾಮೆರಾಗೆ ಫೋಸ್ ಕೊಟ್ಟಿದ್ದಾರೆ. ಈ ಸಮಯದಲ್ಲಿಯೇ ಚಿನ್ನು ಕವಿತಾ ಗೌಡ ಹಾಗೂ ಗೊಂಬೆ ನೇಹಾ ಗೌಡ ಒಟ್ಟಿಗೆ ಇಲ್ಲಿ ಪರಸ್ಪರ ಶುಭಾಶಯ ಕೂಡ ತಿಳಿಸಿಕೊಂಡಿದ್ದಾರೆ.
ನೇಹಾ ಗೌಡಗೆ ಚಿನ್ನು ಕವಿತಾ ಗೌಡ ಹ್ಯಾಪಿ ಡೆಲಿವರಿ ಅಂತ ಹೇಳಿದ್ದಾರೆ. ಚಿನ್ನು ಕವಿತಾ ಗೌಡಗೆ ನೇಹಾ ಗೌಡ ಕೂಡ ಶುಭಾಶಯ ತಿಳಿಸಿದ್ದಾರೆ. ಪರಸ್ಪರ ಗುಡ್ ಲಕ್ ಹೇಳಿದ ಈ ಸ್ನೇಹಿತೆಯರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಕೂಡ ಶೇರ್ ಆಗಿವೆ. ಇವುಗಳನ್ನ ಸ್ವತಃ ನೇಹಾ ಗೌಡ ಹಂಚಿಕೊಂಡಿದ್ದಾರೆ.
ನೇಹಾ ಗೌಡ ಮತ್ತು ಕವಿತಾ ಗೌಡ ವಿಶೇಷ ಫೋಟೋಗಳು ಹೆಚ್ಚು ಗಮನ ಸೆಳೆಯುತ್ತಿವೆ. ಒಟ್ಟಿಗೆ ಒಂದೇ ಸೀರಿಯಲ್ನಲ್ಲಿ ಅಭಿನಯಿಸಿರೋ ಈ ನಟಿಯರು ಒಳ್ಳೆ ಹೆಸರು ಕೂಡ ಮಾಡಿದ್ದಾರೆ. ಈಗಲೂ ಈ ಒಂದು ಲಕ್ಷ್ಮಿಬಾರಮ್ಮ ಸೀರಿಯಲ್ನಿಂದಲೇ ಗುರುತಿಸಿಕೊಳ್ಳುತ್ತಾರೆ.
ನೇಹಾ ಗೌಡ ಮತ್ತು ಕವಿತಾ ಗೌಡ ಅವರ ಈ ಒಂದು ಸೀರಿಯಲ್ನಲ್ಲಿ ಚಂದನ್ ಕುಮಾರ್ ಹೀರೋ ಆಗಿದ್ದರು. ಮೊದಲು ಲಚ್ಚಿಯನ್ನ ಮದುವೆ ಆಗೋ ಪಾತ್ರದಲ್ಲಿಯೇ ಚಂದನ್ ಕಾಣಿಸಿಕೊಂಡಿದ್ದರು. ಆ ಮೇಲೆ ಗೊಂಬೆಯನ್ನ ವಿವಾಹ ಆಗೋ ಕಥೆ ಇತ್ತು. ಬಳಿಕ ರಿಯಲ್ ಲೈಫ್ ನಲ್ಲೂ ಕವಿತಾ ಗೌಡ ಹಾಗೂ ಚಂದನ್ ಒಂದಾಗಿದ್ದರು.