ಕೋಲಾರ:- ಕೋಟ್ಯಂತರ ರೂಪಾಯಿ ಮೌಲ್ಯದ ಶ್ರೀಗಂಧ ಮರ ಕಳ್ಳತನ ಆಗಿರುವ ಘಟನೆ ಕೋಲಾರ ತಾಲ್ಲೂಕು ಮಲ್ಲಸಂದ್ರ ಗ್ರಾಮದಲ್ಲಿ ಜರುಗಿದೆ.
ಗ್ರಾಮದ ಬಚ್ಚಣ್ಣ ಎಂಬುವರಿಗೆ ಸೇರಿದ ಶ್ರೀಗಂಧದ ಮರಗಳು ಕಳ್ಳತನ ಆಗಿದೆ. ಸುಮಾರು 16 ವರ್ಷದ 30 ಕ್ಕೂ ಹೆಚ್ಚು ಶ್ರೀಗಂಧದ ಮರ ಕಳ್ಳತನ ಆಗಿದ್ದು, ರೈತ ಕಂಗಾಲಾಗಿದ್ದಾರೆ.
ಕೋಟ್ಯಾಂತರ ರೂಪಾಯಿಗೆ ಮಾರಾಟವಾಗಬೇಕಿದ್ದ ಮರಗಳು ಇದೀಗ ಕಳ್ಳತನ ಆಗಿದ್ದು, ದಿಕ್ಕೇ ತೋಚದಂತಾಗಿದೆ. ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.