ಚಾರ್ಲಿ ಸಿನಿಮಾದ ನಟಿ ಸಂಗೀತಾ ಶೃಂಗೇರಿ ಬಿಗ್ ಬಾಸ್ ಮನೆಯಲ್ಲಿ ಸಖತ್ ಸದ್ದುಮಾಡಿದ್ದರು. ತಮ್ಮ ನೇರವಾದ ಮಾತು, ಬಿಗ್ ಫೈಟ್, ಕಠಿಣ ಸ್ಪರ್ಧೆ ನೀಡುತ್ತೆ, ಸ್ಟ್ರಾಂಗ್ ಕಂಟೆಸ್ಟಂಟ್ ಆಗಿ ಕೊನೆಯವರೆಗೂ ಉಳಿದುಕೊಂಡಿದ್ದ ಸ್ಪರ್ಧಿಗಳಲ್ಲಿ ಸಂಗೀತ ಶೃಂಗೇರಿ ಕೂಡ ಒಬ್ಬರು.
ಬಿಗ್ ಬಾಸ್ ನಿಂದ ಹೊರ ಬಂದ ಬಳಿಕವೂ ಸಂಗೀತ ಕ್ರೇಜ್ ಕಮ್ಮಿಯಾಗಿಲ್ಲ. ಸದ್ಯ ಸಂಗೀತ ಅವರ ಒಂದಷ್ಟು ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸ್ಟ್ರೀಟ್ ಫೋಟೊಗ್ರಾಫರ್ ಒಬ್ಬರು ಶೂಟ್ ಮಾಡಿದಂತಹ ಫೋಟೊಗಳು ಇದಾಗಿದ್ದು, ಫೋಟೋದಲ್ಲಿ ನಟಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
ಸಂಗೀತ ಶೃಂಗೇರಿಯ ಹೊಸ ಲುಕ್ ನೋಡಿ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಈ ಫೋಟೊಗಳಿಗೆ ಈಗಾಗಲೇ 2 ಲಕ್ಷಕ್ಕೂ ಅಧಿಕ ಲೈಕ್ಸ್ , ಸಾವಿರಾರು ಕಾಮೆಂಟ್ಸ್ ಗಳೂ ಬಂದಿವೆ. ಹೆಚ್ಚಾಗಿ ಸಿಂಪಲ್ ಆಗಿ ಕಾಣಿಸಿಕೊಳ್ಳುವ ಸಂಗೀತ ಇಲ್ಲಿ ಮಾಡರ್ನ್ ಆಗಿ ಜೊತೆಗೆ ತುಂಬಾನೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
ಸಂಗೀತ ಡೆನಿಮ್ ಡಂಗ್ರಿ ಡ್ರೆಸ್ ಧರಿಸಿದ್ದು, ಅದಕ್ಕೆ ಪರ್ಪಲ್ ಬಣ್ಣದ ಟೀ ಶರ್ಟ್ ಧರಿಸಿದ್ದಾರೆ. ಇದರ ಜೊತೆಗೆ ಹೈ ಹೀಲ್ಡ್ ಶೂಸ್ ಧರಿಸಿ, ಎರಡು ಜಡೆ ಕಟ್ಟಿದ್ದು , ತುಂಬಾನೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಇವರ ಬೋಲ್ಡ್ ಲುಕ್ ನೋಡಿ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ.
ಬಿಗ್ ಬಾಸ್ ನಿಂದ ಹೊರಗೆ ಬಂದ ಮೇಲೆ ಸಂಗೀತ ಒಂದು ಸಿನಿಮಾ ಬಿಡುಗಡೆಯಾಗಿತ್ತು, ಅದು ದಿಗಂತ್ ಜೊತೆಗಿನ ಮಾರಿಗೋಲ್ಡ್. ಸದ್ಯ ಸಂಗೀತಾ ಧ್ಯಾನ. ಯೋಗ, ಮೆಡಿಟೇಷನ್ ಅಂತ ಬ್ಯುಸಿಯಾಗಿದ್ದಾರೆ. ಅಷ್ಟೇ ಅಲ್ಲ ಕ್ರಿಸ್ಟಲ್ ಗಳನ್ನು ಮಾರಾಟ ಮಾಡಲು ಸಿಂಹಿಣಿ ಬೈ ಸಂಗೀತ ಎನ್ನುವ ಆನ್ ಲೈನ್ ಸ್ಟೋರ್ ಕೂಡ ತೆರೆದಿದ್ದಾರೆ.