ಕಾಂತಾರ ಸಿನಿಮಾ ಬಳಿಕ ನಟಿ ಸಪ್ತಮಿ ಗೌಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಕಾಂತಾರ ಸಿನಿಮಾದ ಬಳಿಕ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಸೋಷಿಯಲ್ ಮೀಡಿಯಾದಲ್ಲೂ ಸಖತ್ ಆಕ್ಟೀವ್ ಆಗಿದ್ದಾರೆ.
ಸಖತ್ ಬ್ಯುಸಿ ಶೆಡ್ಯೂಲ್ ನಡುವೆಯೂ ನಟಿ ಮದುವೆ ಸಂಭ್ರಮವೊಂದರಲ್ಲಿ ಭಾಗಿಯಾಗಿದ್ದಾರೆ.
ಲಂಗ-ದಾವಣಿ ತೊಟ್ಟ ಸಪ್ತಮಿ ಗೌಡ, ಟ್ರೆಡಿಷನಲ್ ಲುಕ್ನಲ್ಲಿ ಮಿಂಚುತ್ತಿದ್ದಾರೆ. ಪಿಂಕ್ ಕಲರ್ ಲಂಗಕ್ಕೆ ಗ್ರೀನ್ ಕಲರ್ ದಾವಣಿ ತೊಟ್ಟ ಸಪ್ತಮಿ ಗೌಡ, ಸೊಂಟಕ್ಕೆ ಡಾಬು, ಕತ್ತಿಗೆ ಲಾಂಗ್ ಚೈನ್ ಹಾಗೂ ಸಿಂಪಲ್ ನೆಕ್ಲೇಸ್ ಧರಿಸಿದ್ದು ಸೌಂದರ್ಯವತಿಯಾಗಿ ಕಂಗೊಳಿಸಿದ್ದಾರೆ.
ಸಪ್ತಮಿ ಗೌಡ ಫ್ಯಾಮಿಲಿ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಮದುವೆ ಸಂಭ್ರಮದ ನಡುವೆ ಭರ್ಜರಿ ಫೋಟೋಶೂಟ್ ಕೂಡ ಮಾಡಿದ್ದು ಮದುವೆಯಲ್ಲಿ ತೆಗೆದ ಸುಂದರ ಕ್ಷಣಗಳ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟಿ ಸಪ್ತಮಿ ಗೌಡ ಸಿಕ್ಕಾಪಟ್ಟೆ ಸ್ಲಿಮ್ ಆಗಿದ್ದಾರೆ. ನ್ಯೂ ಲುಕ್ನಲ್ಲಿ ನಟಿ ಫೋಟೋ ಶೂಟ್ ಮಾಡಿಸಿದ್ದು ನಟಿಯ ಲುಕ್ ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ಕಾಂತಾರ ಲೀಲಾ ಫುಲ್ ಬ್ಯುಸಿ ಆಗಿದ್ದಾರೆ. ಕಾಂತಾರ ಸಿನಿಮಾ ಹಿಟ್ ಆದ ಬಳಿಕ ನಟಿ ಸಪ್ತಮಿ ಗೌಡ ಸಹ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ದಾರೆ. ಕಾಂತಾರ ಪ್ರೀಕ್ವೆಲ್ ನಲ್ಲೂ ನೀವೇ ನಾಯಕಿಯಾಗ್ಬೇಕು ಎನ್ನುತ್ತಿದ್ದಾರೆ ಅಭಿಮಾನಿಗಳು.
ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ ನಟಿ ಸಪ್ತಮಿ ಗೌಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ನಟ ಡಾಲಿ ಧನಂಜಯ್ ಜೊತೆ ತೆರೆ ಹಂಚಿಕೊಂಡಿದ್ದರು. 2ನೇ ಸಿನಿಮಾ ಕಾಂತಾರ ದಲ್ಲಿ ನಟ ರಿಷಬ್ ಶೆಟ್ಟಿಗೆ ಜೋಡಿಯಾಗಿ ನಟಿಸಿದ ಬಳಿಕ ಸಪ್ತಮಿ ಗೌಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.
ಸದ್ಯ ಸಪ್ತಮಿ ಕೈ ತುಂಬಾ ಸಿನಿಮಾಗಳಿದ್ದು, ಕನ್ನಡಕ್ಕೆ ನನ್ನ ಮೊದಲ ಆದ್ಯತೆ ಎಂದು ಹೇಳಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಕಾಂತಾರ ಲೀಲಾ ಫುಲ್ ಬ್ಯುಸಿ ಆಗಿದ್ದಾರೆ. ಟಾಲಿವುಡ್ ಸಿನಿಮಾ ಶೂಟಿಂಗ್ನಲ್ಲೂ ಸಪ್ತಮಿ ಭಾಗಿಯಾಗಿದ್ದಾರೆ ಎನ್ನಲಾಗ್ತಿದೆ.