ಡಾ.ರಾಜ್ ಕುಮಾರ್ ಕುಟುಂಬದಲ್ಲಿ ಮೊದಲ ಭಾರಿಗೆ ದಂಪತಿಯೊಂದು ವಿಚ್ಚೇದನ ಕೋರಿ ಕೋರ್ಟ್ ಮೆಟ್ಟಿಲೇರಿದೆ. ಈ ಸುದ್ದಿ ಅಭಿಮಾನಿಗಳಿಗೆ ಬರ ಸಿಡಿಲಿನಂತೆ ಬಂದೆರಗಿದೆ. ಯುವ ರಾಜ್ ಕುಮಾರ್ ಹಾಗೂ ಶ್ರೀದೇವಿ ವಿಚ್ಚೇದನದ ಕುರಿತು ಸಾಕಷ್ಟು ಚರ್ಚೆಗಳು ಕೇಳಿ ಬರ್ತಿದೆ. ಯುವ ಬದುಕಿನಲ್ಲಿ ನಟಿ ಸಪ್ತಮಿ ಗೌಡ ಎಂಟ್ರಿಕೊಟ್ಟಿದ್ದೆ ಈ ಇಬ್ಬರು ದೂರವಾಗೋಕೆ ಕಾರಣ ಎನ್ನಲಾಗುತ್ತಿದ್ದು ಈ ಬಗ್ಗೆ ಯುವ ಪರ ವಕೀಲರು ಸ್ಪಷ್ಟನೆ ನೀಡಿದ್ದಾರೆ.
ಶ್ರೀದೇವಿ ಬೈರಪ್ಪ ತಮ್ಮ ವಕೀಲರ ಮೂಲಕ ರಿಪ್ಲೈ ನೋಟಿಸ್ ನೀಡಿದ್ದರು. ಇದರಲ್ಲಿ ‘ಯುವ’ ಜೊತೆ ನಟಿಸಿದ ಸಪ್ತಮಿ ಗೌಡ ಹೆಸರನ್ನು ಉಲ್ಲೇಖ ಮಾಡಲಾಗಿದೆ. ತಮ್ಮ ಪತಿ ಯುವ ರಾಜ್ಕುಮಾರ್ ತಮ್ಮ ಸಹ ನಟಿ ಸಪ್ತಮಿ ಗೌಡ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಹೀಗಾಗಿ ಇದು ಮತ್ತಷ್ಟು ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದೆ.
ಯುವ ರಾಜ್ಕುಮಾರ್ ಮೇಲೆ ಶ್ರೀದೇವಿ ಬೈರಪ್ಪ ಹಲವು ಆರೋಪಗಳನ್ನು ಮಾಡಿದ್ದಾರೆ. ಮಾನಸಿಕ ಹಿಂಸೆ, ಆರ್ಥಿಕ ನಿರ್ಬಂಧ, ಸಹ ನಟಿ ಸಪ್ತಮಿ ಗೌಡ ಜೊತೆ ಸಂಬಂಧದಂತಹ ಆರೋಪಗಳನ್ನು ಮಾಡಿದ್ದಾರೆ. ಸಪ್ತಮಿಗೌಡ ಹೆಸರು ಜೋರಾಗಿ ಸುದ್ದಿಯಾಗುತ್ತಿದ್ದಂತೆ ಯುವ ರಾಜ್ಕುಮಾರ್ ಪರ ವಕೀಲರು ಸ್ಪಷ್ಟನೆ ನೀಡಿದ್ದಾರೆ.
ದೇವಿ ಬೈರಪ್ಪ ಮಾಡಿರುವ ಆರೋಪಗಳಿಗೆ ಯುವ ಪರ ವಕೀಲರಾಗಿರುವ ಸಿರಿಲ್ ಪ್ರಸಾದ್ ಕ್ಲಾರಿಟಿ ನೀಡಿದ್ದಾರೆ. ಯುವ ರಾಜ್ಕುಮಾರ್ಗೂ, ನಟಿ ಸಪ್ತಮಿಗೌಡಗೂ ಯಾವುದೇ ಸಂಬಂಧವೂ ಇಲ್ಲ. ‘ಯುವ’ ಸಿನಿಮಾ ಶೂಟಿಂಗ್ ವೇಳೆ ಇಬ್ಬರ ಜೊತೆಗಿದ್ದ ಫೋಟೊಗಳನ್ನು ತೆಗೆದುಕೊಂಡು ಶ್ರೀದೇವಿ ಸುಳ್ಳು ಆರೋಪಗಳನ್ನು ಮಾಡಿದ್ದಾರೆಂದು ವಕೀಲರಾದ ಸಿರಿಲ್ ಪ್ರಸಾದ್ ಹೇಳಿದ್ದಾರೆ.
ಇದೇ ವೇಳೆ ಶ್ರೀದೇವಿ ಬೈರಪ್ಪ ಮಾಡಿದ ಆರೋಪಗಳ ಪಟ್ಟಿಯಲ್ಲಿ ಯುವ ರಾಜ್ಕುಮಾರ್ಗೆ ಲೈಂಗಿಕತೆಯಲ್ಲಿ ಸಮಸ್ಯೆಯಿದೆ ಎಂದಿದ್ದಾರೆ. ಅವರೇ ಬೇರೆ ನಟಿಯೊಂದಿಗೆ ಸಂಬಂಧ ಇದೆ ಎಂದಿದ್ದಾರೆ. ಒಂದು ವೇಳೆ ಲೈಂಗಿಕತೆಯಲ್ಲಿ ಸಮಸ್ಯೆ ಇದ್ದಿದ್ದರೆ, ಬೇರೊಂದು ಸಂಬಂಧ ಹೊಂದಲು ಹೇಗೆ ಸಾಧ್ಯ? ಎಂದು ವಕೀಲ ಸಿರಿಲ್ ಪ್ರಸಾದ್ ಪ್ರಶ್ನೆ ಮಾಡಿದ್ದಾರೆ.
ಇದೇ ವೇಳೆ ಯುವ ಪರ ವಕೀಲರು ಶ್ರೀದೇವಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಶ್ರೀದೇವಿಯವರಿಗೆ ಅಕ್ರಮ ಸಂಬಂಧವಿದೆ. ರಾಧಯ್ಯ ಎಂಬುವವರ ಜೊತೆ ಸಂಬಂಧವಿದೆ ಎಂದು ಶ್ರೀದೇವಿ ಬೈರಪ್ಪ ಮೇಲೆ ಸಿರಿಲ್ ಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ.