ಬಾಲಿವುಡ್ ನಟ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಸಿನಿಮಾಗಿಂತ ಹೆಚ್ಚಾಗಿ ಖಾಸಗಿ ವಿಚಾರಗಳಿಂದ ಹೆಚ್ಚೆಚ್ಚು ಸುದ್ದಿಯಾಗ್ತಿದ್ದಾರೆ. ಇತ್ತೀಚೆಗೆ ಬಾಲಿವುಡ್ ನಟ ಆದಿತ್ಯಾ ರಾಯ್ ಕಪೂರ್ ಜೊತೆ ಸಾರಾ ಡೇಟಿಂಗ್ ಸುದ್ದಿ ಕೇಳಿ ಬಂದಿತ್ತು. ಇದೀಗ ಸಾರಾ ಮದುವೆಗೆ ರೆಡಿಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು ಉದ್ಯಮಿ ಜೊತೆ ಹಸೆಮಣೆ ಏರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಟೌನ್ನಲ್ಲಿ ಸಾರಾ ಬಗ್ಗೆ ಮದುವೆ ಸುದ್ದಿ ಜೋರಾಗಿಯೇ ಕೇಳಿ ಬರ್ತಿದೆ. ಉದ್ಯಮಿಯೊಬ್ಬರ ಜೊತೆ ಈಗಾಗಲೇ ಸಾರಾ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ನಟಿ ಮದುವೆಗೆ ತಯಾರಿ ಮಾಡಿಕೊಳ್ತಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲಿಯೇ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಚಾರ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಆದರೆ ನಟಿಯ ಕುಟುಂಬದಿಂದ ಈ ಬಗ್ಗೆ ಯಾವುದೇ ಸ್ಟಷ್ಟನೆ ಇಲ್ಲ.
ಸಾರಾ ಹೆಸರು ಸುಶಾಂತ್ ಸಿಂಗ್ ರಜಪೂತ್, ಕಾರ್ತಿಕ್ ಆರ್ಯನ್, ಆದಿತ್ಯಾ, ಕ್ರಿಕೆಟಿಗ ಶುಭಮನ್ ಗಿಲ್ ಜೊತೆ ಕೇಳಿ ಬಂದಿತ್ತು. ಈಗ ಉದ್ಯಮಿ ಜೊತೆಗಿನ ಸಾರಾ ಮದುವೆ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಆದರೆ ಇದೆಲ್ಲಾ ಗಾಳಿ ಸುದ್ದಿ ಎಂಬ ಮಾತು ಕೇಳಿ ಬರ್ತಿದೆ. ಈ ಬಗ್ಗೆ ಸೈಫ್ ಕುಟುಂಬ ಅಧಿಕೃತ ಮಾಹಿತಿ ನೀಡುವವರೆಗೂ ಕಾದು ನೋಡಬೇಕಿದೆ.