ಗುವಾಹಟಿ,: ಕೇಂದ್ರ ಬಂದರು, ಶಿಪ್ಪಿಂಗ್ ಮತ್ತು ಜಲಮಾರ್ಗ ಮತ್ತು ಆಯುಷ್ ಸಚಿವ ಸರ್ಬಾನಂದ ಸೋನೊವಾಲ್ ಅವರು ಇಂದು ಗುವಾಹಟಿಯಲ್ಲಿ ಶಾಂಘೈ ಸಹಕಾರ ಸಂಸ್ಥೆ (ಎಸ್‍ಸಿಒ) ಅಡಿಯಲ್ಲಿ ಸಾಂಪ್ರದಾಯಿಕ ಔಷಧದ ಮೊದಲ ‘ಬಿ 2 ಬಿ ಜಾಗತಿಕ ಸಮ್ಮೇಳನ ಮತ್ತು ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು. ಇಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ಅಂತಾರಾಷ್ಟ್ರೀಯ ಶೃಂಗಸಭೆಯಲ್ಲಿ 17 ದೇಶಗಳಿಂದ 150ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ. ಕೇಂದ್ರ ಸಚಿವರು ಇಂದು ಬಿ2ಬಿ ಎಕ್ಸ್‍ಪೋವನ್ನು ಉದ್ಘಾಟಿಸಿದರು.
ಎಸ್‍ಸಿಓ ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಕೇಂದ್ರ ಆಯುಷ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವ ಡಾ.ಮಹೇಂದ್ರಭಾಯಿ ಮುಂಜ್ಪಾರಾ ಅವರು ಭಾಗವಹಿಸಿದ್ದರು; ಅವರ ಜತೆಗೆ ಮ್ಯಾನ್ಮಾರ್‍ನ ಗೌರವಾನ್ವಿತ ಕೇಂದ್ರ ಆರೋಗ್ಯ ಸಚಿವರಾದ ಡಾ ಥೆಟ್ ಖೈಂಗ್ ವಿನ್; ಮಾಲ್ಡೀವ್ ಸರ್ಕಾರದ ಗೌರವಾನ್ವಿತ ಆರೋಗ್ಯ ಉಪ ಸಚಿವ ಸಫಿಯಾ ಮೊಹಮ್ಮದ್ ಸಯೀದ್ ಮತ್ತು ಆಯುಷ್ ಸಚಿವಾಲಯದ ಕಾರ್ಯದರ್ಶಿ, ವೈದ್ಯ ರಾಜೇಶ್ ಕೋಟೆಚಾ ಮತ್ತಿತರರು ಭಾಗವಹಿಸಿದ್ದರು.
ಕೇಂದ್ರ ಸಚಿವರು, “ನಮ್ಮ ಆಹಾರ ಮತ್ತು ಆಹಾರ ಕ್ರಮ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಆಯುರ್ವೇದ ಮತ್ತು ಇತರ ಸಾಂಪ್ರದಾಯಿಕ ಔಷಧ ಪದ್ಧತಿಗಳು ವಿವಿಧ ಆಹಾರ ಪದಾರ್ಥಗಳ ನಿರ್ದಿಷ್ಟ ಆರೋಗ್ಯ ಪ್ರಯೋಜನಗಳ ಮೇಲೆ ಹೆಚ್ಚಿನ ಗಮನವನ್ನು ನೀಡಿವೆ ಮತ್ತು ಅವುಗಳ ಪಾಕವಿಧಾನಗಳು ಸಣ್ಣ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವುದರ ಜೊತೆಗೆ ವಿವಿಧ ರೋಗಗಳಿಗೆ ಚಿಕಿತ್ಸೆ ನೀಡಲು ಒದಗಿಸಿದ ಚಿಕಿತ್ಸೆಗಳಿಗೆ ಪೂರಕವಾಗಿವೆ. ದೇಹಕ್ಕೆ ಅಗತ್ಯವಾದ ಖನಿಜಗಳು, ನಾರುಗಳು ಮತ್ತು ಇತರ ಪದಾರ್ಥಗಳನ್ನು ಜೈವಿಕ-ಲಭ್ಯವಿರುವ ರೂಪದಲ್ಲಿ ಒದಗಿಸುವಲ್ಲಿ ರಾಗಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಸಾಂಪ್ರದಾಯಿಕ ಔಷಧದ ಉತ್ತೇಜನಕ್ಕೆ ಭಾರತದ ಬದ್ಧತೆಯ ಕುರಿತು ಮಾತನಾಡಿದ ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್, “ಪ್ರಧಾನಿ ಶ್ರೀ ನರೇಂದ್ರ ಮೋದಿ ಜಿ ಅವರ ಕ್ರಿಯಾತ್ಮಕ ನಾಯಕತ್ವದಲ್ಲಿ, ರೋಗಿಗಳ ಆರೈಕೆಯ ಶ್ರೀಮಂತ ಪರಂಪರೆಯೊಂದಿಗೆ ಸಾಂಪ್ರದಾಯಿಕ ಔಷಧೀಯ ಪದ್ಧತಿಗಳನ್ನು ಪುನರುಜ್ಜೀವನಗೊಳಿಸಲು ಭಾರತವು ಆಳವಾಗಿ ಹೂಡಿಕೆ ಮಾಡುತ್ತಿದೆ. ಭಾರತದ ಜಾಮ್‍ನಗರದಲ್ಲಿ ಎಸ್‍ಸಿಓ ಗ್ಲೋಬಲ್ ಸೆಂಟರ್ ಆಫ್ ಟ್ರೆಡಿಷನಲ್ ಮೆಡಿಸಿನ್ ಸ್ಥಾಪನೆಯು ಈ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ. 2022 ರ ಸೆಪ್ಟೆಂಬರ್ 16 ರಂದು ಸಮರ್‍ಖಂಡ್‍ನಲ್ಲಿ ನಡೆದ ಎಸ್‍ಸಿಎ ಶೃಂಗಸಭೆಯಲ್ಲಿ ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಾಂಪ್ರದಾಯಿಕ ಔಷಧದ ಹೊಸ ಎಸ್‍ಸಿಓ ವಕಿರ್ಂಗ್ ಗ್ರೂಪ್‍ಗೆ ಭಾರತವು ಉಪಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಈ ಆಗಸ್ಟ್ ಸಮ್ಮೇಳನ ಮತ್ತು ಎಕ್ಸ್‍ಪೋ ಮೂಲಕ ನಮ್ಮ ಪ್ರಯತ್ನವು ಸಾಂಪ್ರದಾಯಿಕ ಔಷಧೀಯ ಪದ್ಧತಿಗಳ ಸಾಬೀತಾದ ಮತ್ತು ಶ್ರೀಮಂತ ಗುಣಗಳನ್ನು ಪುನರುಜ್ಜೀವನಗೊಳಿಸಲು ಒಟ್ಟಾಗಿ ಕೆಲಸ ಮಾಡುವ ಮತ್ತೊಂದು ಪ್ರಯತ್ನವಾಗಿದೆ. ಇಲ್ಲಿ ನಿಮ್ಮ ಬೆಂಬಲ ಮತ್ತು ಚರ್ಚೆಗಳೊಂದಿಗೆ, ಮಾನವೀಯತೆಯ ಸುಧಾರಣೆಗಾಗಿ ವಿಶ್ವದ ಸಾಂಪ್ರದಾಯಿಕ ಔಷಧವನ್ನು ಮತ್ತಷ್ಟು ತಲುಪಲು ಫಲಿತಾಂಶಗಳನ್ನು ಮುಂದಕ್ಕೆ ತೆಗೆದುಕೊಳ್ಳಲಾಗುವುದು ಎಂದು ನಾವು ಭಾವಿಸುತ್ತೇವೆ ಮತ್ತು ನಂಬುತ್ತೇವೆ” ಎಂದು ನುಡಿದರು. ಎಸ್‍ಸಿಓ ಅಡಿಯಲ್ಲಿ ಸಾಂಪ್ರದಾಯಿಕ ಔಷಧದ ಬಿ2ಬಿ ಕಾನ್ಫರೆನ್ಸ್ ಮತ್ತು ಎಕ್‍ಸ್ಪೋವನ್ನು 2 ರಿಂದ 5 ನೇ ಮಾರ್ಚ್, 2023 ರವರೆಗೆ ಅಸ್ಸಾಂನ ಗುವಾಹಟಿಯಲ್ಲಿ ಆಯೋಜಿಸಲಾಗಿದೆ. ಸಮ್ಮೇಳನ ಮತ್ತು ಎಕ್ಸ್‍ಪೋವು ಎಲ್ಲಾ ಎಸ್‍ಸಿಓ ಮತ್ತು ಪಾಲುದಾರ ದೇಶಗಳಲ್ಲಿನ ನಿಯಂತ್ರಕರು, ಕೈಗಾರಿಕೆಗಳು ಮತ್ತು ವ್ಯಾಪಾರ ನಾಯಕರಿಗೆ ಉತ್ಪನ್ನಗಳು, ಸೇವೆಗಳು, ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಸೌಂದರ್ಯವರ್ಧಕಗಳು,
ಗಿಡಮೂಲಿಕೆಗಳ ಸಾರಗಳಂತಹ ಸಾಂಪ್ರದಾಯಿಕ ಔಷಧದ ವಿವಿಧ ಅಂಶಗಳ ಕುರಿತು ಚರ್ಚಿಸಲು ಅವಕಾಶವನ್ನು ಒದಗಿಸುತ್ತದೆ. ಸಾಂಪ್ರದಾಯಿಕ ಔಷಧ ಮತ್ತು ಸಂಬಂಧಿತ ಕ್ಷೇತ್ರದಲ್ಲಿ ಪರಸ್ಪರ ವ್ಯಾಪಾರ ಮತ್ತು ಸ್ನೇಹ ಸಂಬಂಧ ಎ£ಸ್‍ಸಿಓ ಭಾರತ ಸೇರಿದಂತೆ 17 ದೇಶಗಳಿಂದ 150 ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ, ಇದರಲ್ಲಿ ಉನ್ನತ ಮಟ್ಟದ ಪ್ರತಿನಿಧಿಗಳಾದ ಆರೋಗ್ಯ ಸಚಿವರು, ಅಧಿಕೃತ ಪ್ರತಿನಿಧಿಗಳು ಮತ್ತು Sಅಔ ಮತ್ತು ಪಾಲುದಾರ ರಾಷ್ಟ್ರಗಳ ವಿದೇಶಿ ಖರೀದಿದಾರರು ಸೇರಿದ್ದಾರೆ. ಒಟ್ಟು 75 ವಿದೇಶಿ ಅಧಿಕಾರಿಗಳು ಮತ್ತು 13 ದೇಶಗಳ ವ್ಯಾಪಾರ ಪ್ರತಿನಿಧಿಗಳು ಭೌತಿಕ ಕ್ರಮದಲ್ಲಿ ತಮ್ಮ ಭಾಗವಹಿಸುವಿಕೆಯನ್ನು ದೃಢಪಡಿಸಿದ್ದಾರೆ. ಚೀನಾ, ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್ ಮತ್ತು ಕಝಾಕಿಸ್ತಾನ್‍ನ ಅಧಿಕೃತ ಪ್ರತಿನಿಧಿಗಳು ಆನ್‍ಲೈನ್‍ನಲ್ಲಿ ಸೇರಿಕೊಳ್ಳಲಿದ್ದಾರೆ.
ಕಝಾಕಿಸ್ತಾನ್, ಚೀನಾ, ಕಿರ್ಗಿಸ್ತಾನ್, ಪಾಕಿಸ್ತಾನ, ರಷ್ಯಾ, ತಜಿಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ಭಾರತದ ವಿವರವಾದ ಪ್ರಸ್ತುತಿಗಳೊಂದಿಗೆ ‘ಸಾಂಪ್ರದಾಯಿಕ ಔಷಧ ಉತ್ಪನ್ನಗಳ ನಿಯಂತ್ರಣ ಚೌಕಟ್ಟು’ ನಂತಹ ಅನೇಕ ಆಸಕ್ತಿದಾಯಕ ಸೆಷನ್‍ಗಳಿಗೆ ಸಮ್ಮೇಳನವು ಸಾಕ್ಷಿಯಾಗಲಿದೆ. ಚರ್ಚೆಯು ಫಾರ್ಮಾ ಮತ್ತು ಔಷಧ ತಯಾರಕರ ದೃಷ್ಟಿಕೋನದಿಂದ ವ್ಯಾಪಾರದ ಮಾದರಿಗಳು ಮತ್ತು ಮಾರುಕಟ್ಟೆ ಸನ್ನಿವೇಶವನ್ನು ಅರ್ಥಮಾಡಿಕೊಳ್ಳುವ ಗುರಿಯನ್ನು ಹೊಂದಿದೆ. ಸ್ಥಳೀಯ ಪ್ರಾಮುಖ್ಯತೆ ಮತ್ತು ಜನಪ್ರಿಯತೆಯ ಉತ್ಪನ್ನಗಳ ಪ್ರದರ್ಶನ, ವ್ಯಾಪಾರಕ್ಕೆ ಅವಕಾಶ, ನಾವೀನ್ಯತೆಯ ಕುರಿತು ಚರ್ಚೆಗಳು Sಅಔ ದೇಶಗಳಲ್ಲಿ ವ್ಯಾಪಕ ಮಾರುಕಟ್ಟೆ ಪ್ರವೇಶದೊಂದಿಗೆ ಆಳವಾದ ಸಹಕಾರ ಮತ್ತು ಆರ್ಥಿಕ ಪಾಲುದಾರಿಕೆಗಾಗಿ ಪರಿಸರವನ್ನು ಉತ್ತೇಜಿಸುವ ಸಾಧ್ಯತೆಯಿದೆ.
