ಬೆಂಗಳೂರು: ಕಾಂಗ್ರೆಸ್ ಪಕ್ಷದ ಗೃಹ ಲಕ್ಷ್ಮಿ ಮತ್ತು ಗೃಹ ಜ್ಯೋತಿ ಗ್ಯಾರಂಟಿ ಯೋಜನಗಳ ಗೊಂದಲ ಬಗ್ಗೆ ಇಲಾಖೆ ಸಚಿವರು ಮತ್ತು ಹಿರಿಯ ಅಧಿಕಾರಿಗಳ ಜೊತೆ ಸಿಎಂ ನಡೆಸಿದ್ರು. ಬಾಡಿಗೆದಾರರಿಗೆ ಉಚಿತ ಕರೆಂಟ್ ನೀಡುವ ತೀರ್ಮಾನಕ್ಕೆ ಬಂದ್ರೆ , ಮನೆಯಲ್ಲಿ ಟ್ಯಾಕ್ಸ್ ಕಟ್ಟುವವರು ಇದ್ರೆ ಗೃಹ ಲಕ್ಷ್ಮಿ ಯೋಜನೆ ಅನ್ವಯವಾಗುವುದಿಲ್ಲ ಎಂದು ತೀರ್ಮಾನ ಮಾಡಲಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ವಿಪಕ್ಷಗಳು ತಿರುಗಿಬಿದ್ದಿದ್ದು ವ್ಯಂಗ್ಯವಾಡ್ತಿವೆ.
ಕಾಂಗ್ರೆಸ್ ಅಧಿಕಾರ ಬಂದ ತಕ್ಷಣ ತಾವು ಘೋಷಣೆ ಮಾಡಿದ್ದ 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಈಗಾಗಲೇ ಗ್ಯಾರಂಟಿ ಜಾರಿಯಾಗುವ ದಿನಾಂಕ ಮತ್ತು ಕೆಲ ದಾಖಲೆ ಒದಗಿಸಲು ಸಮಯಾವಕಾಶ ಸಹಾ ನೀಡಿದೆ. ಆದ್ರೆ ಈ ಗ್ಯಾರಂಟಿಗಳಲ್ಲಿ ಗೃಹ ಲಕ್ಷ್ಮಿ ಮತ್ತು ಗೃಹ ಜ್ಯೋತಿ ಬಗ್ಗೆ ರಾಜ್ಯದಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಗಿತ್ತು. ಯಾರಿಗೆ ಈ ಯೋಜನೆಗಳು ಅನ್ವಯವಾಗುತ್ತೆ ಎಂಬ ಚರ್ಚೆಗಳು ನಡೆಯುತ್ತಿದ್ದವು, ಈ ಗೊಂದಗಳಿಗೆ ತೆರೆ ಎಳೆಯಲು ಇಂದು ಸಿಎಂ ಸಿದ್ದರಾಮಯ್ಯ ಸಂಬಂಧ ಪಟ್ಟ ಇಲಾಖೆ ಸಚಿವರು ಮತ್ತು ಅಧಿಕಾರಿಗಳ ಜೊತೆ ಸಭೆ ನಡೆಸಿದ್ರು. ಶಕ್ತಿ ಭವನದಲ್ಲಿ ನಡೆದ ಸಭೆಯಲ್ಲಿ ಗೃಹ ಲಕ್ಷ್ಮಿ ಯೋಜನೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಇಲಾಖೆ ಅಧಿಕಾರಿಗಳ ಜೊತೆ ಸಿಎಂ ಚರ್ಚೆ ನಡೆಸಿದ್ರು. ಅದೇ ರೀತಿ ಗೃಹ ಜ್ಯೋತಿ ಗ್ಯಾರಂಟಿ ಸಭೆಯಲ್ಲಿ ಇಂಧನ ಇಲಾಖೆ ಸಚಿವ ಜಾರ್ಜ್ ಮತ್ತು ಇಲಾಖೆ ಅಧಿಕಾರಿಗಳು, ಸಿಎಸ್ ಸೇರಿ ಹಲವು ಅಧಿಕಾರಿಗಳು ಉಪಸ್ಥಿತರಿದ್ರು.
ಗೃಹಲಕ್ಷ್ಮಿ ಯೋಜನೆಯನ್ನು ಆಗಸ್ಟ್ 17 ಅಥವಾ 18 ರಂದು ಬೆಳಗಾವಿಯಲ್ಲಿ ಚಾಲನೆ ನೀಡುವ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗಿದೆ. ಜೂನ್ 15 ರಿಂದ ಸೇವಾ ಸಿಂಧು ಪೋರ್ಟಲ್ ಮೂಲಕ ಮತ್ತು ನಾಡಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಈ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಬಿಪಿಎಲ್, ಎಪಿಎಲ್ದಾರರಿಗೆ ಗೃಹ ಲಕ್ಷ್ಮಿ ಯೋಜನೆ ಅನ್ವಯವಾಗುತ್ತೆ.. ಆದ್ರೆ ಮನೆಯಲ್ಲಿ ತೆರಿಗೆದಾರರು ಮತ್ತು ಜಿಎಸ್ಟಿ ನೋಂದಣಿದಾರಿದ್ರೆ ಅನ್ವಯವಾಗುವುದಿಲ್ಲ ಎಂದು ತಿಳಿಸಿದ್ರು.. ಅದೇ ರೀತಿ ಗೃಹ ಜ್ಯೋತಿ ಯೋಜನೆ ಎಲ್ಲಾ ಬಾಡಿಗೆದಾರಿಗೂ ಅನ್ವಯವಾಗುತ್ತೆ ಎಂದು ಹೇಳಿದ್ರು..
ಇನ್ನು ಗೃಹ ಲಕ್ಷ್ಮಿ ಯೋಜನೆ ಸಭೆ ಬಳಿಕ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಯೋಜನೆಯಲ್ಲಿ ಯಾವುದೇ ಗೊಂದಲವಿಲ್ಲ. ಸರಳ ರೀತಿಯಲ್ಲಿ ಮಹಿಳೆಯರಿಗೆ ಯೋಜನೆ ತಲುಪಿಸುವ ಬಗ್ಗೆ ಚರ್ಚಿಸಲಾಗಿದೆ. ಆನ್ಲೈನ್ನಲ್ಲಿ ಮತ್ತು ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ತೆರಿಗೆದಾರರಿಗೆ ಗೃಹ ಲಕ್ಷ್ಮಿ ಯೋಜನೆ ಅನ್ವಯಿಸುವುದಿಲ್ಲ. ಎಪಿಎಲ್ ಕಾರ್ಡ್ದಾರರಲ್ಲೂ 11 ಲಕ್ಷ ಜನರು ತೆರಿಗೆದಾರರಿದ್ದು ಮುಂದಿನ ದಿನಗಳಲ್ಲಿ ಅವರಿಗೂ ಯೋಜನೆ ತಲುಪಿಸುವುದಾಗಿ ತಿಳಿಸಿದ್ರು. ಸದ್ಯ 85-88% ರಾಜ್ಯದ ಮಹಿಳೆಯರಿಗೆ ಯೋಜನೆ ತಲುಪುತ್ತದೆ ಆದ್ರೆ ಮನೆಯಲ್ಲಿ ಯಾರೇ ಟ್ಯಾಕ್ಸ್ ಕಟ್ಟಿದ್ರು ಒಡತಿಗೆ ಈ ಯೋಜನೆ ಅನ್ವಯವಾಗುವುದಿಲ್ಲ. ಮಕ್ಕಳು ಟ್ಯಾಕ್ಸ್ ಕಟ್ಟುತ್ತಿದ್ದರೂ ಕೂಡ ತಾಯಿಗೆ ಗೃಹ ಲಕ್ಷ್ಮಿ ಯೋಜನೆ ಅನ್ವಯವಾಗುದಿಲ್ಲ ಎಂದು ಗೊಂದಲ ಮೂಡಿಸಿದ್ರು ಸಚಿವೆ ಹೆಬ್ಬಾಳ್ಕರ್
ಕಾಂಗ್ರೆಸ್ ಸರ್ಕಾರ ಉಚಿತ ಯೋಜನೆಗಳಲ್ಲಿ ಕಂಡೀಶನ್ಸ್ ಹಾಕ್ತರೋದಕ್ಕೆ ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸ್ತಿದ್ದು ವ್ಯಂಗ್ಯವಾಡ್ತಿದ್ದಾರೆ.
ಮಾಜಿ ಸಚಿವ ಆರ್ ಅಶೋಕ್ ಮಾತನಾಡಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳ ಗೊಂದಲ ಸೃಷ್ಟಿ ಮಾಡ್ತಿದೆ. ಸಿದ್ದರಾಮಯ್ಯ ನನಗೂ ಫ್ರೀ ಎಲ್ಲರಿಗೂ ಫ್ರಿ ಮಹದೇವಪ್ಪ ನಿನಗೂ ಪ್ರಿ ಅಂದಿದ್ರು ಇಗ ಹೇಳ್ತಿದ್ದಾರೆ ಟ್ಯಾಕ್ಸ್ ಪೇಯರ್ಸ್ ಗೆ ಇಲ್ಲಾ ಅಂತ. ಗ್ಯಾರಂಟಿ ಕಾರ್ಡ್ ನಲ್ಲಿ ಮೊದಲು ಒಂದು ಕಂಡಿಷನ್ ಹಾಕಿರಲಿಲ್ಲಾ, ಜನಗಳ ದುಡ್ಡು ತಗೊಂಡು ಅವರಿಗೆ ವಾಪಸ್ಸು ಫ್ರಿ ಅಂತ ಕೊಡ್ತಿದ್ದಾರೆ.ಇಡೀ ರಾಜ್ಯದ ಜನ ರೊಚ್ಚಿಗೆದ್ದು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತೆ ಎಂಬ ಎಚ್ಚರಿಕೆ ರವಾನಿಸಿದ್ರು.
ಮಾಜಿ ಸಚಿವ ಸಿಟಿ ರವಿ ಕೂಡ ಕಾಂಗ್ರೆಸ್ ಗ್ಯಾರಂಟಿಗೆ ಆಕ್ರೋಶ ವ್ಯಕ್ತಪಡಿಸಿದರು. ಐದು ಗ್ಯಾರಂಟಿಗಳ ಗೊಂದಲ ಬಗೆಹರಿಸಬೇಕು ನನಗೂ ಫ್ರೀ, ನಿನಗೂ ಫ್ರೀ ಅಂದಿದ್ರು. ಸಿ.ಟಿ ರವಿ ಮನೆಯವರಿಗೂ ಫ್ರೀ ಅಂತ ಹೇಳಿದ್ರು,
ಈಗ ಐ.ಟಿ ಕಟ್ಟೋರಿಗಿಲ್ಲ, ಸರ್ಕಾರಿ ನೌಕರರಿಗೆ ಇಲ್ಲ ಅತಿದ್ದಾರೆ ಎಂದು ವ್ಯಂಗ್ಯ ವಾಡಿದ್ರು. ಮಾಜಿ ಸಚಿವ ಶ್ರೀರಾಮುಲು ಮಾತನಾಡಿ ಗ್ಯಾರಂಟಿ ಯೋಜನೆಗಳ ಜಾರಿ ಕಾಂಗ್ರೆಸ್ ಗೆ ಕಷ್ಟ ಆಗ್ತಿದೆ. ಸರ್ಕಾರದ ಖಜಾನೆ ಖಾಲಿ ಆಗ್ತಿದೆ ಉಚಿತ ಕರೆಂಟ್ ಸಿಗುತ್ತೆ ಅಂತ ನಂಬಿದ ಬಡವರಿಗೆ ಮೋಸ ಮಾಡಿದ್ದಾರೆ.ಗ್ಯಾರಂಟಿಗಳಲ್ಲಿ ಷರತ್ತುಗಳನ್ನು ಹಾಕಿದ್ದಾರೆ, ಇವರ ಗ್ಯಾರಂಟಿಗಳು ಜಾರಿಗೆ ಬರುವ ಲಕ್ಷಣ ಕಾಣಿಸ್ತಿಲ್ಲ ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠ ಕಲಿಸ್ತಾರೆ ಎಂದ್ರು…
ಒಟ್ಟಿನಲ್ಲಿ ರಾಜ್ಯದಲ್ಲಿ ಯಾರೇ ಟ್ಯಾಕ್ಸ್ ಕಟ್ಟುತ್ತಿದ್ರೆ ಕೂಡ ಆ ಮನೆ ಒಡೆತಿಗೆ ಗೃಹ ಲಕ್ಷ್ಮಿ ಯೋಜನೆ ಸಿಗುವುದಿಲ್ಲ ಎಂದು ಸಿಎಂ ಮತ್ತು ಸಚಿವೆ ಹೇಳಿರೋದು 2 ಸಾವಿರ ಸಿಗುತ್ತೆ ಎಂಬ ನಂಬಿಕೆಯಲ್ಲಿದ್ದ ಮಹಿಳೆಯರಿಗೆ ಇದು ಶಾಕ್ ರೀತಿ ಆಗಿದೆ . ಮಕ್ಕಳು ತೆರಿಗೆ ಕಟ್ಟಿದ್ರೆ ತಾಯಿಗೆ 2 ಸಾವಿರ ಸಿಗಲ್ಲ ಎಂಬ ಸಚಿವೆ ಹೇಳಿಕೆ ಗೊಂದಲಕ್ಕೆ ಕಾತಣವಾಗ್ತಿದೆ. ವಿಪಕ್ಷಗಳು ಇದನ್ನ ಖಂಡಿಸ್ತಿದ್ದು ಜನಾಂದೋಲನದ ಮುನ್ಸೂಚನೆ ನೀಡ್ತಿವೆ ಇದನ್ನು ಸರ್ಕಾರ ಯಾವ ರೀತಿ ನಿಭಾಯಿಸುತ್ತೆ ಎಂಬುದನ್ನ ಕಾದು ನೋಡಬೇಕಾಗಿದೆ.