ಕಾರ್ಯಕ್ರಮವೊಂದರಲ್ಲಿ ಪತ್ರಕರ್ತೆ ಜೊತೆ ಸೌದಿ ಅರೇಬಿಯಾದ ಮೊದಲ ರೋಬೋ ಅನುಚಿತ ವರ್ತನೆ ತೋರಿದ ಆರೋಪ ಕೇಳಿ ಬಂದಿದೆ. ಸದ್ಯ ರೋಬೋ ಪತ್ರಕರ್ತೆ ಜೊತೆ ಅನುಚಿತವಾಗಿ ವರ್ತಿಸಿರುವ ವಿಡಿಯೋ ವೈರಲ್ ಆಗಿದೆ.
ರೋಬೋವನ್ನು ಪರಿಚಯಿಸುವ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. 8 ಸೆಕೆಂಡ್ ಗಳ ಅವಧಿಯ ಈ ವೀಡಿಯೋದಲ್ಲಿ ಪತ್ರಕರ್ತೆ ರವಿಯಾ ಅಲ್ ಕಾಸಿಮಿ ಹಿಂದೆ ನಿಲ್ಲಿಸಲಾಗಿದ್ದ ರೋಬೋ ಕೈಗಳು ಆಕೆಯನ್ನು ಮುಟ್ಟಲು ಯತ್ನಿಸುತ್ತಿರುವುದು ಸೆರೆಯಾಗಿದೆ.
ರೋಬೋ ಕೈಗೆ ಸಿಗದಂತೆ ತಪ್ಪಿಸಿಕೊಳ್ಳುವುದಕ್ಕಾಗಿ ಅಲ್-ಖಾಸಿಮಿ ಕ್ಷಣಕಾಲ ತನ್ನ ಕೈಯನ್ನು ಎತ್ತಬೇಕಾಯಿತು. ಈ ಘಟನೆಯು ಆಕಸ್ಮಿಕ ಸ್ಪರ್ಶಕ್ಕೆ ಕಾರಣವಾಗುವ ಪ್ರೋಗ್ರಾಮ್ ಮಾಡಿದ ಕೈ ಚಲನೆಯ ಪರಿಣಾಮವಾಗಿದೆ ಎಂದು ಕೆಲವರು ವಾದಿಸಿದರೆ, ಇತರರು ರೋಬೋಟ್ನ ಕ್ರಮಗಳು ಕಿರುಕುಳವನ್ನು ತೋರುತ್ತದೆ ಎಂದು ವಾದಿಸಿದ್ದಾರೆ. ಈ ಘಟನೆ ನಡೆದಾಗ ಪತ್ರಕರ್ತೆ ಮುಖದಲ್ಲಿ ವ್ಯಕ್ತವಾದ ಅಹಿತಕರ ಭಾವನೆ ರೋಬೋ ಕಿರುಕುಳ ನೀಡಲು ಯತ್ನಿಸಿತ್ತು ಎಂಬುದಕ್ಕೆ ಸಾಕ್ಷಿ ಎಂದು ಅನೇಕರು ಹೇಳಿದ್ದಾರೆ.
ಕ್ಯೂಎಸ್ಎಸ್ ಸಿಸ್ಟಮ್ಸ್ ಸೌದಿ ಅರೇಬಿಯಾದಲ್ಲಿ ಮುಹಮ್ಮದ್ ಎಂಬ ಮೊದಲ ಪುರುಷ ರೋಬೋಟ್ ನ್ನು ತಯಾರಿಸಿದ್ದು ಇದನ್ನು ಸಾರಾಗೆ ಪ್ರತಿರೂಪವಾಗಿ ವಿನ್ಯಾಸಗೊಳಿಸಲಾಗಿದೆ.