ಹುಬ್ಬಳ್ಳಿ: ಕ್ಷೌರಿಕ ವೃತ್ತಿಯಲ್ಲಿ ತೊಡಗಿರುವ ಸವಿತಾ ಸಮಾಜ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದಿದೆ. ಸವಿತಾ ಸಮಾಜಕ್ಕೆ ಪ್ರತ್ಯೇಕ ಮೀಸಲಾತಿ ಕಲ್ಪಿಸಬೇಕು.
ಸರ್ಕಾರ ಕ್ಷೌರಿಕ ತರಬೇತಿ ಕೇಂದ್ರ ಹಾಗೂ ನಾದಸ್ವರ ಡೋಲು ತರಬೇತಿ ಕೇಂದ್ರ ಸ್ಥಾಪಿಸಬೇಕೆಂದು ಹೀಗೆ ಹಲವಾರು ಬೇಡಿಕೆಗಳಿ ಆಗ್ರಹಿಸಿ ಸವಿತಾ ಸಮಾಜದ ಪೀಠಾಧ್ಯಕ್ಷ ಸವಿತಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಹುಬ್ಬಳ್ಳಿಯಿಂದ ಬೆಳಗಾವಿ ವರೆಗೆ ಪಾದಯಾತ್ರೆ ಹೊರಟಿದ್ದಾರೆ.
ಇನ್ನು ಹಳೇ ಹುಬ್ಬಳ್ಳಿಯಿಂದ ಆರಂಭವಾದ ಪಾದಯಾತ್ರೆ, ಸಾವಿರಾರು ಸವಿತಾ ಸಮಾದವರು ಸೇರಿದ್ದು, ಮುಖ್ಯ ರಸ್ತೆ ಮೂಲಕ ಪಾದಯಾತ್ರೆ ಹೊರಟಿದ್ದಾರೆ. ಇನ್ನು ಬೆಳಗಾವಿಯಲ್ಲಿ ನಡೆಯುತ್ತಿರು ಅಧಿವೇಶನದಲ್ಲಿ ಸವಿತಾ ಸಮಾಜದ ಬೇಡಿಕೆಗಳ ಬಗ್ಗೆ ಚರ್ಚೆ ಮಾಡಬೇಕು. ಮತ್ತು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸುವರ್ಣ ಸೌಧದ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುತ್ತದೆಂದು ತಿಳಿಸಿದರು.