ಬೆಂಗಳೂರು: ಸಿಎಂ ಮನೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚಿಸಿದ್ದ ಆರೋಪಿಗೆ ಬೆಂಗಳೂರಿನ ಹೈಕೋರ್ಟ್ ಜಾಮೀನು ನೀಡಿದೆ. ನ್ಯಾಯಮೂರ್ತಿ ಜಿ. ಬಸವರಾಜ ಅವರಿದ್ದ ನ್ಯಾಯಪೀಠ ಪುರಸ್ಕರಿಸಿದ್ದು, ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಪ್ರಕರಣದಲ್ಲಿ ಆರೋಪಿ ಪ್ರದೀಪ್ ಅವರ ಖಾತೆಗೆ ದೂರುದಾರರಿಂದ ಹಣ ಬಂದಿಲ್ಲ. ಇದರ ಬದಲಿಗೆ ಅವರ ಭಾಮೈದುನ ಅರುಣ್ ಕುಮಾರ್ ಎಂಬುವರ ಖಾತೆಗೆ ಹಣ ಕಳುಹಿಸಿದ್ದಾರೆ.
ಅಲ್ಲದೇ, ಪ್ರಕರಣದ ಮೂರನೇ ಆರೋಪಿ ಈಗಾಗಲೇ ಜಾಮೀನು ಪಡೆದುಕೊಂಡಿದ್ದಾರೆ. ಹೀಗಾಗಿ ಅರ್ಜಿದಾರರಿಗೆ ಜಾಮೀನು ಮಂಜೂರು ಮಾಡುತ್ತಿರುವುದಾಗಿ ನ್ಯಾಯಪೀಠ ತಿಳಿಸಿದೆ.
50 ಸಾವಿರ ರೂಪಾಯಿ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಭದ್ರತೆ ಒದಗಿಸಬೇಕು. ಸಾಕ್ಷ್ಯಗಳ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಪ್ರಭಾವ ಬೀರಬಾರದು. ತನಿಖಾಧಿಕಾರಿಗೆ ಕರೆದಲ್ಲಿ ಹಾಜರಾಗಬೇಕು ಎಂಬುದಾಗಿ ಷರತ್ತುಗಳನ್ನು ವಿಧಿಸಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ.