ನವದೆಹಲಿ: ದೇಶದ ಜನರ ಜನನ ಮತ್ತು ಮರಣ ಮಾಹಿತಿಯನ್ನು ಮತದಾರರ ಪಟ್ಟಿಯೊಂದಿಗೆ ( Voter List ) ಲಿಂಕ್ ಮಾಡಲು ಸರ್ಕಾರ ಯೋಜನೆ ರೂಪಿಸುತ್ತಿದೆ. ಈ ಸಂಬಂಧ ಮುಂದಿನ ಮುಂಗಾರು ಸಂಸತ್ ಅಧಿವೇಶನದಲ್ಲಿ ಹೊಸ ವಿಧೇಯಕ ಮಂಡಿಸಿವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಮತದಾರರ ಪಟ್ಟಿಯೊಂದಿಗೆ ಜನನ, ಮರಣ ಮಾಹಿತಿ ಜೋಡಣೆಯಿಂದ ವೋಟರ್ ಲೀಸ್ಟ್ ಪರಿಷ್ಕರಣೆ ಸ್ವಯಂಚಾಲಿತವಾಗಿಯೇ ಆಗಲಿದೆ. ಯಾವುದೇ ವ್ಯಕ್ತಿಗೆ 18 ವರ್ಷ ವಯಸ್ಸು ತುಂಬುತ್ತಲೇ ಮತದಾರರ ಗುರುತಿನ ಚೀಟಿ ಮಾಡಿಸಿಕೊಳ್ಳುವಂತೆ ಚುನಾವಣಾ ಆಯೋಗದ ( Election Commission ) ಕಡೆಯಿಂದ ಸೂಚನೆ ಬರಲದಿ ಎಂದರು.
ಇದೇ ರೀತಿ ಯಾವುದೇ ವ್ಯಕ್ತಿಯ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲು ಸಾಧ್ಯವಾಗಲಿದೆ. ಆದರೇ ಇದಕ್ಕೂ ಮುನ್ನ ಆ ವ್ಯಕ್ತಿಯ ಕುಟುಂಬ ಸದಸ್ಯರಿಗೆ 15 ದಿನದೊಳಗೆ ಮರಣದ ವಿಷಯವನ್ನು ದೃಢಪಡಿಸುವಂತೆ ಕೋರಲಾಗುವುದು. ಸೆನ್ಸಸ್ ರಿಜಿಸ್ಟ್ರಾರ್ ಕಡೆಯಿಂದ ಪತ್ರ ಅಥವಾ ಸಂದೇಶದ ಮುಖಾಂತರ ಈ ದೃಢೀಕರಣ ಕೇಳಲಾಗುತ್ತದೆ. ಕುಟುಂಬ ಸದಸ್ಯರು ಯಾವುದೇ ಆಕ್ಷೇಪಣೆ ಸಲ್ಲಿಸದಿದ್ದರೇ, ಮತದಾರರ ಪಟ್ಟಿಯಿಂದ ಆಯೋಗವು ಹೆಸರನ್ನು ರದ್ದುಪಡಿಸಲಿದೆ ಎಂದು ಮಾಹಿತಿ ನೀಡಿದರು.