ವಾಷಿಂಗ್ಟನ್: ಭಾರತದಲ್ಲಿ 1948ರಲ್ಲೇ ಜಾತಿ ತಾರತಮ್ಯವನ್ನು ನಿಷೇಧಿಸಲಾಗಿದೆ. ಇದೀಗ ಅಮೆರಿಕದ ಸಿಯಾಟಲ್ ಇಂಥದ್ದೊಂದು ಕ್ರಮ ತೆಗೆದುಕೊಳ್ಳುವ ಮೂಲಕ ಜಗತ್ತಿನ ಮೊದಲ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಿಯಾಟಲ್ ಪಾಲಿಕೆ ಸದಸ್ಯೆ, ಭಾರತೀಯ ಮೂಲದ ಕ್ಷಮಾ ಸಾವಂತ್ ಈ ನಿರ್ಣಯ ಮಂಡಿಸಿದ್ದು, ಅವಿರೋಧವಾಗಿ ಅನುಮೋದನೆ ಮಂಡನೆಯಾಗಿದೆ.
ಉದ್ಯಮಗಳಲ್ಲಿ, ಮನೆ ಬಾಡಿಗೆ ನೀಡುವಾಗ, ಇತರೆ ಯಾವುದೇ ಸಾರ್ವಜನಿಕ ಕೇಂದ್ರಗಳಲ್ಲಿ ಜಾತಿ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ಅಮೆರಿಕದ ಸಿಯಾಟಲ್ ನಗರದಲ್ಲಿ ನಿಷೇಧಿಸಲಾಗಿದೆ. ಇನ್ನೊಂದು ಕಡೆ ಈ ನಿರ್ಣಯ ಅಮೆರಿಕದ ಹಿಂದೂ ಸಮುದಾಯದಲ್ಲಿ ಭೀತಿಯನ್ನೂ ಹುಟ್ಟಿಸಿದೆ.