ನವದೆಹಲಿ: ರಾಜ್ಯದ 3ನೇ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ (Vande Bharat Express Train) ಸೆಪ್ಟೆಂಬರ್ 24ಕ್ಕೆ ಅಧಿಕೃತ ಚಾಲನೆ ದೊರೆಯಲಿದೆ. ಇಂದು ಈ ರೈಲು ಪ್ರಾಯೋಗಿಕ ಸಂಚಾರ ನಡೆಸಲಿದೆ. ಹೈದರಾಬಾದ್ನ ಕಾಚಿಗುಡ – ಯಶವಂತಪುರ ನಿಲ್ದಾಣದ ನಡುವೆ ಸಂಚರಿಸುವ ರೈಲಿಗೆ ಸೆಪ್ಟೆಂಬರ್ 24ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಇದು ದಕ್ಷಿಣ ಭಾರತದ 2 ಐಟಿ ನಗರಗಳ ನಡುವಿನ ಮೊದಲ ವಂದೇ ಭಾರತ್ ರೈಲಾಗಲಿದೆ.
ಇಂದು ರೈಲು ಕಾಚಿಗುಡದಿಂದ ಹೊರಟು ಮಧ್ಯಾಹ್ನ 2 ಗಂಟೆಗೆ ಯಶವಂತಪುರ ನಿಲ್ದಾಣ ತಲುಪಲಿದೆ. ಮಧ್ಯಾಹ್ನ 2:45 ಕ್ಕೆ ಯಶವಂತಪುರದಿಂದ ಕಾಚಿಗುಡ ತೆರಳಲಿದೆ. ರೈಲು ಸುಮಾರು 610 ಕಿ.ಮೀ ಅಂತರವನ್ನು 7 ಗಂಟೆಯಲ್ಲಿ ಕ್ರಮಿಸಬಹುದು ಎಂದು ಬೆಂಗಳೂರು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.