ಬೆಂಗಳೂರು : 2022-23 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ( Karnataka Second PUC Exam Results ) ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಶೇ. 74.64 ಫಲಿತಾಂಶ ಬಂದಿದೆ. ಕಳೆದ ಬಾರಿ 61.88 ಫಲಿತಾಂಶ ಬಂದಿತ್ತು. ಡಾ.ರಾಮಚಂದ್ರನ್ ಮಾಧ್ಯಮಗಳಿಗೆ ಮಾಹಿತಿ ತಿಳಿಸಿದರು. ಒಟ್ಟು 61 ಕೇಂದ್ರಗಳಲ್ಲಿ ಈ ಬಾರಿ ಮೌಲ್ಯಮಾಪನ ಮಾಡಲಾಗಿತ್ತು , ಈ ಬಾರಿ ಶೇ. 74.64 ಮಂದಿ ಪಾಸಾಗಿದ್ದಾರೆ ಅಂತ ತಿಳಿಸಿದರು.
ಇನ್ನು ಮಾರ್ಚ್ 09 ರಿಂದ ಮಾರ್ಚ್ 29ರವರೆಗೆ ನಡೆದ ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ವಿದ್ಯಾರ್ಥಿಗಳು-3,63,698, ವಿದ್ಯಾರ್ಥಿನಿಯರು- 3,62,497 ಸೇರಿ ಒಟ್ಟು 7,26,195 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಪೈಕಿ ಹೊಸಬರು 6.29 ಲಕ್ಷ ವಿದ್ಯಾರ್ಥಿಗಳು, ಖಾಸಗಿ 25,847 ವಿದ್ಯಾರ್ಥಿಗಳು, ಪುನರಾವರ್ತಿತ 70,589 ವಿದ್ಯಾರ್ಥಿಗಳು, ಕಲಾ ವಿಭಾಗ 2,34,815 ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗ 2,47,260 ವಿದ್ಯಾರ್ಥಿಗಳು, ವಿಜ್ಞಾನ ವಿಭಾಗ 2,44,120 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ -2023 ಪರಿಶೀಲಿಸುವುದು ಹೇಗೆ?
- nic.in ನ ಅಧಿಕೃತ ಸ್ಥಳಕ್ಕೆ ಭೇಟಿ ನೀಡಿ.
- ಫಲಿತಾಂಶದ ಲಿಂಕ್ ಅನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
- ಫಲಿತಾಂಶದ ಲಿಂಕ್ ಅನ್ನು ಪರಿಶೀಲಿಸಿ ಮತ್ತು ಲಾಗಿನ್ ವಿವರಗಳನ್ನು ನಮೂದಿಸಿ.
- ಒಮ್ಮೆ ಮಾಡಿದ ನಂತರ, ಸಬ್ಮಿಟ್ ಮೇಲೆ .
- ನಿಮ್ಮ ಫಲಿತಾಂಶವು ಪರದೆಯ ಮೇಲೆ ಪ್ರದರ್ಶಿತವಾಗುತ್ತದೆ.
- ಫಲಿತಾಂಶವನ್ನು ಪರಿಶೀಲಿಸಿ ಮತ್ತು ಪುಟವನ್ನು ಡೌನ್ ಲೋಡ್ ಮಾಡಿ.
- ಹೆಚ್ಚಿನ ಅಗತ್ಯಕ್ಕಾಗಿ ಅದರ ಹಾರ್ಡ್ ಕಾಪಿಯನ್ನು ಇರಿಸಿಕೊಳ್ಳಿ