ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಶೇ. 87.98ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ವರ್ಷ ಶೇ. 87.33ರಷ್ಟು ಫಲಿತಾಂಶ ಬಂದಿತ್ತು. ಕಳೆದ ವರ್ಷಕ್ಕಿಂತಲೂ ಈ ಬಾರಿ ಪಾಸಿಂಗ್ ಪರ್ಸಂಟೇಜ್ ಹೆಚ್ಚು ಬಂದಿದೆ. ಆದರೆ, ಬೆಂಗಳೂರಿನ ವಿದ್ಯಾರ್ಥಿಗಳು ಕಳೆದ ವರ್ಷಕ್ಕಿಂತಲೂ ಕಡಿಮೆ ತೇರ್ಗಡೆ ಆಗಿದ್ದಾರೆ.ಶೇ. 96.95ರಷ್ಟು ಬೆಂಗಳೂರಿಗರು ಪಾಸ್ ಆಗಿದ್ದಾರೆ. ಪ್ರಾದೇಶಿಕವಾರು ಪಟ್ಟಿ ಮಾಡಲಾಗಿರುವ 17 ನಗರಗಳಲ್ಲಿ ಬೆಂಗಳೂರು ನಾಲ್ಕನೇ ಸ್ಥಾನಕ್ಕೆ ಇಳಿದಿದೆ.
ಕಳೆದ ವರ್ಷ ಬೆಂಗಳೂರು ಸಿಬಿಎಸ್ಇ ಕ್ಲಾಸ್ 12 ಪರೀಕ್ಷೆಯಲ್ಲಿ ಶೇ. 98.64ರಷ್ಟು ರಿಸಲ್ಟ್ ಪಡೆದಿತ್ತು.ಕೇರಳದ ತಿರುವನಂತರಪುರಂ ನಗರ ಶೇ 99.91ರಷ್ಟು ಫಲಿತಾಂಶ ಪಡೆದು ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದೆ. ಕಳೆದ ಹಲವು ವರ್ಷಗಳಿಂದಲೂ ತಿರುನಂತಪುರಂ ಅಗ್ರಸ್ಥಾನ ಪಡೆಯುತ್ತಲೇ ಇದೆ. ಕಳೆದ ವರ್ಷ ಅದರ ಪಾಸಿಂಗ್ ಪರ್ಸಂಟೇಜ್ ಶೇ. 99.91ರಷ್ಟೇ ಇತ್ತು. ಈ ವರ್ಷವೂ ಅಷ್ಟೇ ಇದೆ.