ಜಿಲ್ಲೆಯ ನಂಜನಗೂಡು ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಆರೋಪ ಹೊರಿಸಿದ್ದಾರೆ ಎಂದು ಮನನೊಂದು ಸೆಲ್ಫಿ ವಿಡಿಯೋ ಮಾಡಿ ಸೆಕ್ಯೂರಿಟಿ ಗಾರ್ಡ್ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜರುಗಿದೆ
.ನಂಜೇಶ್ ಮೃತ ಸೆಕ್ಯೂರಿಟಿ ಗಾರ್ಡ್ ಎಂದು ತಿಳಿದು ಬಂದಿದೆ. ನಂಜನಗೂಡಿನ ಮಹದೇವ ನಗರದ ನಿವಾಸಿ ಆಗಿರುವ ನಂಜೇಶ್, ಕಲ್ಮಲ್ಲಿ ವ್ಯಾಪ್ತಿಯ ಕೈಗಾರಿಕಾ ಪ್ರದೇಶದಲ್ಲಿರುವ ಸೆಕ್ಯೂರಿಟಿ ಗಾರ್ಡ್ ರೆಹಾನ್ಸ್ ಕಾರ್ಖಾನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.