ಭಾರೀ ಊಟದ ನಂತರ ಅಸಿಡಿಟಿಯಿಂದಬಳಲುತ್ತಿದ್ದರೆ, ಬಿಸಿಲಿನಿಂದ ಸುಸ್ತಾಗಿ ಮನೆಗೆ ಬಂದಾಗ, ತಂಪು ಪಾನೀಯಗಳ, ಸೋಡಾ ಇತರೆ ಬಾಟಲಿಯನ್ನು ಮೊರೆ ಹೋಗುವ ಬದಲು ಮನೆಯಲ್ಲೇ ಮಜ್ಜಿಗೆ ಸೇವಿಸಿ ನೋಡಿ. ಹೌದು ಮಸಾಲೆ ಮಜ್ಜಿಗೆ, ಮೊಸರು ಕಡಿದು ಬೆಣ್ಣೆ ತಗೆದ ಕಡಿದ ಮಜ್ಜಿಗೆ, ನೀರಾಗಿರುವ ಮಜ್ಜಿಗೆ ಸೇವಿಸಿ ನಂತರ ಅದರ ಚಮತ್ಕಾರವನ್ನು ಅನುಭವಿಸಿ ನೋಡಿ.
ಮೊಸರು ಮತ್ತು ಜೀರಿಗೆ, ಕರಿಬೇವಿನ ಎಲೆಗಳು, ಶುಂಠಿ ಮತ್ತು ಉಪ್ಪು, ಮಜ್ಜಿಗೆ ಮುಂತಾದ ಮಸಾಲೆಗಳಿಂದ ತಯಾರಿಸಿದ ರುಚಿಕರವಾದ, ತಂಪಾದ ಪಾನೀಯವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ನೀವು ಪ್ರತಿದಿನ ಒಂದು ಲೋಟ ಮಜ್ಜಿಗೆ ಕುಡಿಯುವುದರಿಂದ ಆರೋಗ್ಯಕ್ಕಾಗುವ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.
ಮಸಾಲೆಯುಕ್ತ ಊಟದ ನಂತರ ಹೊಟ್ಟೆಯನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ:
ತಂಪಾದ, ನೀರಿರುವ ಮೊಸರಿನೊಂದಿಗೆ ಅಂದರೆ ಮಜ್ಜಿಗೆಯೊಂದಿಗೆ ತಯಾರಿಸಲಾಗುತ್ತದೆ. ಈ ಪಾನೀಯವು ಹೊಟ್ಟೆಯ ಉರಿಯನ್ನು ಶಮನಗೊಳಿಸುತ್ತದೆ. ಊಟದ ಮಸಾಲೆಯಿಂದ ಉಂಟಾಗುವ ಕಿರಿಕಿರಿಯಿಂದ ಹೊಟ್ಟೆಯನ್ನು ಶಾಂತಗೊಳಿಸುತ್ತದೆ. ಮೊಸರು, ನೀರು, ಜೀರಿಗೆ, ಮೆಣಸು ಹಾಗೂ ಕರಿಬೇವು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯುವುದರಿಂದ ಹೊಟ್ಟೆಯ ಕಿರಿಕಿರಿ ನಿವಾರಿಸುತ್ತದೆ.
ಕೊಬ್ಬನ್ನು ಕರಗಿಸುತ್ತದೆ:
ಹೊಟ್ಟೆ ಭಾರವಾಗುವಷ್ಟು ಊಟ ಸೇವಿಸಿದಾಗ ಕಡಲತೀರದ ತಿಮಿಂಗಿಲದAತೆ ಆಗುತ್ತೇವೆ. ಹೀಗೆ ಹೊಟ್ಟೆ ಭಾರವಾಗುಷ್ಟು ಊಟ ಮಾಡಿದ ನಂತರ ಒಂದು ಸಣ್ಣ ಲೋಟ ನೀರಾಗಿರುವ ಮಜ್ಜಿಗೆಯನ್ನು ಕುಡಿಯಿರಿ. ಏಕೆಂದರೆ ಸಾಮಾನ್ಯವಾಗಿ ಆಹಾರ ಪೈಪ್ಮತ್ತು ಹೊಟ್ಟೆಯ ಒಳಗೆ ಆವರಿಸುವ ಕೊಬ್ಬು, ಎಣ್ಣೆ(Oil) ಅಥವಾ ತುಪ್ಪವನ್ನು ತೊಳೆಯುವಲ್ಲಿ ಮಜ್ಜಿಗೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಅಲ್ಲದೆ ಈ ಮಜ್ಜಿಗೆಗೆ ಶುಂಠಿ, ಮೆಣಸು ಮತ್ತು ಇತರೆ ಮಸಾಲೆಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಗೆ ಸಹಕಾರಿ:
ನೀರಾಗಿರುವ ಮಜ್ಜಿಗೆಗೆ ಶುಂಠಿ, ಮೆಣಸು ಮತ್ತು ಜೀರಿಗೆ ಸಂಯೋಜಿಸಿದಾಗ ಅತ್ಯುತ್ತಮ ಜೀರ್ಣಕಾರಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಮಸಾಲೆಗಳ ಕಾರ್ಮಿನೇಟಿವ್ ಗುಣಲಕ್ಷಣಗಳು ಮತ್ತು ಹಿತವಾದ ಮಜ್ಜಿಗೆ ಹಾಗೂ ರಿಫ್ರೆಶ್ ಗುಣಲಕ್ಷಣಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಆದ್ದರಿಂದ, ಅಜೀರ್ಣವಾದಾಗ ತ್ವರಿತ ಪರಿಹಾರಕ್ಕಾಗಿ ಒಂದು ಲೋಟ ಮಸಾಲೆ ಮಜ್ಜಿಗೆಯನ್ನು ಕುಡಿಯಿರಿ.