ಬೆಂಗಳೂರು:-SSLC ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಮತ್ತೊಂದು ಶಾಕ್ ಕೊಟ್ಟಿದ್ದು, ಸರ್ಕಾರದಿಂದ ಮತ್ತೊಂದು ಎಡವಟ್ಟು ಬಯಲಾಗಿದೆ.
SSLC ಯಲ್ಲಿ ನಡೆಯುವ ಪ್ರಿಪೇರ್ಟರಿ ಪರೀಕ್ಷೆ ಗೆ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆ ತರಬೇಕು. ಇಲಾಖೆ ಇಂದ ಕೇವಲ ಪ್ರಶ್ನೆ ಪತ್ರಿಕೆ ಮಾತ್ರ ವಿತರಣೆ ಮಾಡಲಾಗುತ್ತದೆ. ಈಗಾಗ್ಲೇ ಪ್ರಶ್ನೆ ಪತ್ರಿಕೆಗೆ ಪ್ರತಿ ಒಬ್ಬ ವಿದ್ಯಾರ್ಥಿ ಇಂದ 50 ರೂಪಾಯಿ ಶುಲ್ಕವನ್ನು ಇಲಾಖೆ ಕಟ್ಟಿಸಿಕೊಂಡಿದೆ.
ಹೀಗಾಗಿ ಪ್ರಿಪೇರ್ಟರಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಗೆ ಮಾತ್ರ ಶುಲ್ಕ ಕಟ್ಟಿಸಿಕೊಳ್ಳಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಹೇಳಿದೆ. ಇಲಾಖೆಯ ಈ ನಿರ್ಧಾರಕ್ಕೆ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಈಗಾಗ್ಲೇ ವಾಟ್ಸಪ್ಪ್ ಮೂಲಕ ಪೋಷಕರಿಗೆ ಆಯಾ ಶಾಲಾ ಪ್ರಾಂಶುಪಾಲರು ಸಂದೇಶ ಕಳಿಸಿದ್ದಾರೆ. ಹೀಗಾಗಿ ಮತ್ತೊಂದು ವಿವಾದಕ್ಕೆ ರಾಜ್ಯ ಸರ್ಕಾರ ಗುರಿಯಾಗಿದೆ.