ಕಳೆದ ಒಂದೆರಡು ದಿನಗಳಿಂದ ಕನ್ನಡ ಕಿರುತೆರೆ ನಟ ವರುಣ್ ಆರಾಧ್ಯ ಹಾಗೂ ಆತನ ಮಾಜಿ ಪ್ರೇಯಸಿ ಬ್ಯಾಕ್ ಟು ಬ್ಯಾಕ್ ಸುದ್ದಿಯಾಗ್ತಿದ್ದಾರೆ. ವರುಣ್ ಆರಾಧ್ಯ ವಿರುದ್ಧ ಮಾಜಿ ಪ್ರೇಯಸಿ ಗಂಭೀರ ಆರೋಪ ಮಾಡಿದ್ದು, ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು. ಆದರೆ ಈಗ ವರುಣ್ ಆರಾಧ್ಯ ಹಾಗೂ ಮಾಜಿ ಪ್ರೇಯಸಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವನ್ನು ಶೇರ್ ಮಾಡಿ ಇದೆಲ್ಲಾ ಸುಳ್ಳು ಸುದ್ದಿ ಅಂತ ಡ್ರಾಮಾ ಮಾಡ್ತಾ ಇದ್ದಾರೆ. ಮಾಧ್ಯಮದಲ್ಲಿ ನೋಡುತ್ತಿರುವುದು ಸುಳ್ಳು ಮಾಹಿತಿ. ಫೇಕ್ ಸುದ್ದಿ ಹರಡುವುದನ್ನ ನಿಲ್ಲಿಸಿ ಅಂತ ವರುಣ್ ಆರಾಧ್ಯ ಹಾಗೂ ಮಾಜಿ ಪ್ರೇಯಸಿ ಮನವಿ ಮಾಡಿದ್ದಾರೆ.
ಇನ್ನು, ಇದೇ ವಿಚಾರವಾಗಿ ವರುಣ್ ಆರಾಧ್ಯ ಯುಟ್ಯೂಬ್ ಚಾನೆಲ್ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ತುಂಬಾ ಜನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಜೈಲಲ್ಲಿ ಇದ್ದಾರೆ ಅಂತ ಯಾಕೆ ಹೇಳುತ್ತಿದ್ದೀರಾ? ನಾನು ಆರಾಮ ಆಗಿ ನಮ್ಮ ಮನೆಯಲ್ಲಿ ಇದ್ದೇನೆ. ಯಾಕೆ ತಪ್ಪು ತಪ್ಪಾಗಿ ಇನ್ಫಾಮೇಶನ್ ಕೊಡ್ತಾ ಇದ್ದೀರಿ? ಏನಾದ್ರೂ ಇದ್ರೆ ನಮ್ಮನ್ನು ಕೇಳಿಕೊಂಡು ಹಾಕಿ. ಅವರ ಪಾಡಿಗೆ (ಮಾಜಿ ಪ್ರೇಯಸಿ) ಅವರಿದ್ದಾರೆ. ನಮ್ಮ ಪಾಡಿಗೆ ನಾವಿದ್ದೇವೆ. ನಿನ್ನೆ ಆ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ಒಂದು ಮನವಿ ಮಾಡಿದ್ದರು. ನನ್ನದು ಮತ್ತು ಅವರದ್ದು ಇನ್ಸ್ಟಾಗ್ರಾಮ್ನಲ್ಲಿ 2018ರಲ್ಲಿ ರೀಲ್ಸ್ ಮತ್ತು ವಿಡಿಯೋಗಳನ್ನು ಮಾಡಿದ್ದೇವು. ಅದೇ ವಿಡಿಯೋಗಳನ್ನು ಡಿಲೀಟ್ ಮಾಡುವುದರ ಬಗ್ಗೆ ಮನವಿ ಮಾಡಿಕೊಂಡಿದ್ದರು. ಆ ವಿಡಿಯೋಗಳನ್ನು ಡಿಲೀಟ್ ಮಾಡೋದಕ್ಕೆ ನನಗೆ ಅಷ್ಟು ಸಮಯ ಇರಲಿಲ್ಲ. ನಾನು ಬ್ಯುಸಿಯಾಗಿದ್ದೆ. ಇನ್ನೂ ನಮ್ಮಿಬ್ಬರ ಹಲವಾರು ವಿಡಿಯೋಗಳು ಹಾಗೇ ಇದ್ದಿದ್ದವು. ನಾಲ್ಕು ವರ್ಷಗಳಿಂದ ಸಾಕಷ್ಟು ವಿಡಿಯೋಗಳನ್ನು ಮಾಡಿದ್ದೇವೆ. ಹಾಗಾಗಿ ಕೆಲವೊಂದು ಹಾಗೇ ಉಳಿದುಕೊಂಡು ಬಿಟ್ಟಿದೆ. ಅದಕ್ಕಾಗಿ ಅವರ ಮುಂದಿನ ಲೈಫ್ನಲ್ಲಿ ಆ ವಿಡಿಯೋಗಳಿಂದ ತೊಂದರೆ ಆಗಬಾರದು ಅಂತ ಡಿಲೀಟ್ ಮಾಡಿಕೊಳ್ಳಲು ಮನವಿ ಮಾಡಿದ್ದರು ಅಂತ ಹೇಳಿದ್ದಾರೆ.
ಮುಂದುವರೆದ ಮಾತನಾಡಿದ ವರುಣ್, ಬೆಂಗಳೂರು ಪಶ್ಚಿಮ ವಿಭಾಗ ಸೈಬರ್ ಕ್ತೈಂ ಎಸಿಪಿ ಉಷಾರಾಣಿ ಅವರ ಮುಂದೆ ಹೋಗಿ ನಮ್ಮ ಇಚ್ಛೆಯಂತೆ ಕುಳಿತು ಮಾತಾಡಿ ಸಮಸ್ಯೆಯನ್ನು ಬಗೆಹರಿಸಿಕೊಂಡು ನಮ್ಮ ನಮ್ಮ ಲೈಫ್ ಅನ್ನು ನೋಡಿಕೊಳ್ಳುತ್ತಿದ್ದೇವೆ. ಆದರೆ ಮೀಡಿಯಾದಲ್ಲಿ ಕೊಲೆ ಬೆದರಿಕೆ ಅಂತ ಹಾಕುತ್ತಿದ್ದಾರೆ. ಅಷ್ಟೇ ಯಾಕೆ ಆ ಯುವತಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ನಮ್ಮ ಲೈಫ್ ಚೆನ್ನಾಗಿ ಇರಬೇಕು ಅಂತ ನಾವು ಮುಂದೆ ಹೋಗುತ್ತಿದ್ದೇವೆ. ಆದರೆ ನೀವೇ ನಮ್ಮ ಲೈಫ್ನಲ್ಲಿ ಕಲ್ಲು ಹಾಕುತ್ತಿದ್ದೀರಾ. ನಮ್ಮ ಮನೆಯಲ್ಲಿ ನಮ್ಮ ಕುಟುಂಬಸ್ಥರು ಇದನ್ನು ನೋಡಿ ನೊಂದು ಹೋಗಿದ್ದಾರೆ. ನನ್ನ ಒಳ್ಳೆ ತನವನ್ನು ಎಲ್ಲರೂ ಮಿಸ್ ಯೂಸ್ ಮಾಡಿಕೊಳ್ಳುತ್ತಿದ್ದಾರೆ ಅಂತ ಕಣ್ಣೀರು ಹಾಕಿದ್ದಾರೆ.
ವರುಣ್ ಆರಾಧ್ಯ ಮಾಜಿ ಪ್ರೇಯಸಿ ವರುಣ್ ವಿರುದ್ಧ ಸೆ.7ರಂದು ಬೆಂಗಳೂರು ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್.ಐ.ಆರ್ ದಾಖಲಿಸಿದ್ದರು. ದೂರಿನ ಅನ್ವಯ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು. ದಾಖಲಾಗಿರುವ ದೂರಿನಲ್ಲಿ ಖಾಸಗಿ ವಿಡಿಯೋ ಲೀಕ್ ಮಾಡೋದಾಗಿ ಬೆದರಿಕೆ ಹಾಕಿರೋ ಆರೋಪವನ್ನು ಉಲ್ಲೇಖಿಸಿದ್ದರು. ಆದರೀಗ ಇನ್ಸ್ಟಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ಆಕೆ ಸುಳ್ಳು ಸುದ್ದಿ ಎಂದು ಬರೆದುಕೊಂಡಿದ್ದಾರಂತೆ. ಇನ್ನೂ ಖಾಸಗಿ ಯೂಟ್ಯೂಬ್ ಚಾನಲ್ ನಲ್ಲಿ ಮಾತನಾಡಿದ ಮಾಜಿ ಪ್ರೇಯಸಿ ದೂರು ನೀಡಿರುವುದು ಹೌದು. ಆದರೆ ಇದು ಈ ಮಟ್ಟಿಗೆ ಸುದ್ದಿಯಾಗುತ್ತದೆ ಎಂದು ಗೊತ್ತಿರಲಿಲ್ಲ ಎಂದಿದ್ದಾರೆ.