ಗದಗ:- ರೇಷನ್ ಕಾರ್ಡ್ ತಿದ್ದಿಪಡಿಗೆ ಹೋದವರಿಗೆ ಸರ್ವಸ್ ಸಮಸ್ಯೆಯಿದ ತಲೆನೋವು ಶುರುವಾಗಿದೆ.
ಸೇವಾ ಕೇಂದ್ರದಲ್ಲಿ ಸರ್ವಡ್ ಡೌನ್ ಸಮಸ್ಯೆಯಿಂದ ಜನತೆ ಬೇಸತ್ತು ಹೋಗಿದ್ದು, ಆಕ್ರೋಶಗೊಂಡ ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ.
ಗದಗ ನಗರದ ಮುಳಗುಂದ ನಾಕಾದಲ್ಲಿ ರಸ್ತೆ ತಡೆ ನಡೆಸಿ ಪ್ರೊಟೆಸ್ಟ್ ನಡೆಸಲಾಗಿದೆ. ಗದಗ ನಗರದ ಎಸಿ ಕಚೇರಿ ಕಟ್ಟಡದಲ್ಲಿರೋ ಸೇವಾ ಕೇಂದ್ರದಲ್ಲಿ ರೇಷನ್ ಕಾರ್ಡ್ ನಲ್ಲಿ ಹೆಸರು ತಿದ್ದುಪಡಿಗೆ ಜನ ಬಂದಿದ್ದರು. ಕೇಂದ್ರದ ಸಿಬ್ಬಂದಿಯ ಸರ್ವರ್ ಡೌನ್ ಸಬೂಬು ಕೇಳಿ ಜನತೆ ಆಕ್ರೋಶಗೊಂಡಿದ್ದಾರೆ. ಈ ಹಿನ್ನೆಲೆ ಏಕಾ ಏಕಿ ರಸ್ತೆಗಿಳಿದು ಪ್ರತಿಭಟನೆಗೆ ಮುಂದಾಗಿದ್ದರು.
ಪ್ರತಿಭಟನೆಯಿಂದಾಗಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪ್ರತಿಭಟನಾ ನಿರತರನ್ನ ಪೊಲೀಸರು ಸಮಾಧಾನ ಪಡಿಸಿ ಕಳುಹಿಸಿದ್ದಾರೆ.
ಪೊಲೀಸರ ಮನವಿಯಿಂದ ಜನತೆ ಪ್ರತಿಭಟನೆ ಬಿಟ್ಟಿದ್ದಾರೆ.