ಬಾಲಿವುಡ್ ನಟಿ ಜಾನ್ವಿ ಕಪೂರ್ ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರಿಗೆ ಜೋಡಿಯಾಗುತ್ತಿರುವ ಜಾನ್ವಿ ಇದೀಗ ತಮ್ಮ ಮದುವೆ ಪ್ಲ್ಯಾನ್ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ, ಮದುವೆಯ ಬಳಿಕ 3 ಮಕ್ಕಳೊಂದಿಗೆ ತಿರುಮಲದಲ್ಲಿ ಸೆಟಲ್ ಆಗುವ ಆಸೆ ಇದೆ ಎಂದಿದ್ದಾರೆ.
ಜಾನ್ವಿ ಕಪೂರ್ ತಿರುಮಲ ತಿಮ್ಮಪ್ಪನ ಭಕ್ತೆಯಾಗಿದ್ದು ತಿಮ್ಮಪ್ಪ ದೇವರಲ್ಲಿ ಅಪಾರ ನಂಬಿಕೆ ಹೊಂದಿದ್ದಾರೆ. ಆಗಾಗ ನಟಿ ತಿರುಪತಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಇದೀಗ ಜಾನ್ವಿ ಮದುವೆಯಾಗಿ ತಿರುಪತಿಯಲ್ಲೇ ನೆಲೆಸುವ ಆಸೆಯಿದೆ ಎಂದು ಹೇಳಿಕೊಂಡಿದ್ದಾರೆ.
ಕರಣ್ ಜೋಹರ್ ಶೋನಲ್ಲಿ ಮಾತಾಡಿದ ಜಾನ್ವಿ, ಮದುವೆಯಾಗಿ ತಿರುಮಲದಲ್ಲಿ ಪತಿಯೊಂದಿಗೆ ಸೆಟಲ್ ಆಗ್ತೀನಿ ಎಂದಿದ್ದಾರೆ. ಮದುವೆ ಬಳಿಕ 3 ಮಕ್ಕಳೊಂದಿಗೆ ನೆಮ್ಮದಿಯಿಂದ ಬದುಕುವಾಸೆ ಇದೆ. ತಿರುಪತಿ ತಿರುಮಲದಲ್ಲಿ ಸೆಟಲ್ ಆಗಿ ದಿನವೂ ಬಾಳೆ ಎಲೆ ಊಟ ಮಾಡಬೇಕು ಎಂದು ಮನದಾಳದ ಆಸೆಯನ್ನು ವ್ಯಕ್ತಪಡಿಸಿದ್ದಾರೆ.
ಗೋವಿಂದಾ ಗೋವಿಂದಾ ಎಂದು ಸ್ಮರಿಸಬೇಕು. ಮಣಿರತ್ನಂ ಅವರ ಸಿನಿಮಾಗಳ ಸಂಗೀತವನ್ನ ಕೇಳುತ್ತಾ ದಿನ ಕಳೆಯುವೆ ಎಂದು ನಟಿ ಹೇಳಿದ್ದಾರೆ. ಶಿಖರ್ ಪಹಾರಿಯಾ ಜೊತೆ ಜಾನ್ವಿ ಡೇಟಿಂಗ್ ವಿಚಾರ ಸಾಕಷ್ಟು ಭಾರೀ ಕೇಳಿ ಬಂದಿದೆ. ಇಬ್ಬರೂ ಜೊತೆಯಾಗಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ.