ಬೆಂಗಳೂರು: ಮುಂಗಾರು ಮಳೆ (Monsoon Rain) ಹೊತ್ತಲ್ಲಿ ಆತಂಕ ಮೂಡಿಸುವ ಸುದ್ದಿಯನ್ನು ನೀತಿ ಆಯೋಗ (Niti Aayoga) ನೀಡಿದೆ. ಮುಂದಿನ 25 ವರ್ಷದಲ್ಲಿ ಕಾವೇರಿ ಕೊಳ್ಳ ಪ್ರದೇಶದಲ್ಲಿ (Basin of The Cauvery River) ನೀರಿನ ತೀವ್ರ ಕೊರತೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ.
ಕರ್ನಾಟಕ (Karnataka) ಮತ್ತು ತಮಿಳುನಾಡು (Tamilnadu) ರಾಜ್ಯಗಳು ಕಡಿಮೆ ನೀರಿನಲ್ಲಿ ಬೆಳೆ ಬೆಳೆಯುವ ಪದ್ದತಿಯನ್ನು ಅಳವಡಿಸಿಕೊಳ್ಳುವ ಬದಲು ಹೆಚ್ಚು ನೀರನ್ನು ಉಪಯೋಗಿಸುವ ಯೋಜನೆಗಳಿಗೆ ಕೈ ಹಾಕುತ್ತಿವೆ. ಇದರಿಂದ ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಬಿಕ್ಕಟ್ಟು ಹೆಚ್ಚಾಗುವ ಸಂಭವವಿದೆ. ಹೀಗಾಗಿ ಅಂತರ್ಜಲ ಹೆಚ್ಚಳಕ್ಕೆ ಮುಂದಾಗಬೇಕು ಎಂದು ಹೇಳಿದೆ.
ಪ್ರಸಕ್ತ ಮುಂಗಾರಿನ ಮೊದಲ 40 ದಿನದಲ್ಲಿ ಚಿಕ್ಕಮಗಳೂರಿನಲ್ಲಿ 28%ರಷ್ಟು, ಕೊಡಗಿನಲ್ಲಿ 21%ರಷ್ಟು, ಶಿವಮೊಗ್ಗದಲ್ಲಿ 20%ರಷ್ಟು ಮಳೆ ಕೊರತೆಯಾಗಿದೆ. ಕೊಡಗಿನಲ್ಲಿ ಮಳೆ ಕಡಿಮೆಯಾದ ಕಾರಣ ಕಾವೇರಿಕೊಳ್ಳದ ಜಲಾಶಯಗಳ ಒಳಹರಿವು ಕೂಡ ಕಡಿಮೆಯಾಗಿದೆ.
Dailyhunt