‘ಬಿಗ್ ಬಾಸ್’ ಹಿಂದಿ ಒಟಿಟಿ 3 ಶೋ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೆ ಇದೆ. ಇದುವರೆಗೂ ಬಿಗ್ ಬಾಸ್ ಎಂದೇ ಫ್ಯಾಮಿಲಿ ಶೋ ಎಂದೇ ಖ್ಯಾತಿ ಘಳಿಸಿದ್ದ ಈ ಶೋ ಇದೀಗ ದಿನೇ ದಿನೇ ನೋಡುಗರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಇದೀಗ ಹಿಂದಿ ಬಿಗ್ ಬಾಸ್ ಒಟಿಟಿ 3ರಲ್ಲಿ ಘಟನೆಯೊಂದು ನಡೆದಿದ್ದು ಇದರಿಂದ ಸಾಕಷ್ಟು ಮಂದಿ ಗರಂ ಆಗಿದ್ದಾರೆ. ‘ಬಿಗ್ ಬಾಸ್ ಒಟಿಟಿ 3’ನಲ್ಲಿ ಅರ್ಮಾನ್ ಮಲಿಕ್ ಹಾಗೂ ಅವರ ಎರಡನೇ ಪತ್ನಿ ಕೃತಿಕಾ ಮಲಿಕ್ ಬ್ಲ್ಯಾಂಕೇಟ್ ಒಳಗೆ ಒಂದಾಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.
ರಾತ್ರಿ ಆದ ಬಳಿಕ ಬಿಗ್ ಬಾಸ್ ಮನೆಯಲ್ಲಿ ಲೈಟ್ ಆಫ್ ಆಗುತ್ತದೆ. ಆದರೆ, ಬಿಗ್ ಬಾಸ್ ಮನೆಯಲ್ಲಿ ಇರುವ ಕ್ಯಾಮೆರಾಗಳು ಎಷ್ಟು ಆಧುನಿಕವಾಗಿರುತ್ತವೆ ಎಂದರೆ ಎಷ್ಟೇ ಕಗ್ಗತ್ತಲು ಇದ್ದರೂ ಕ್ಯಾಮೆರಾ ಕಣ್ಣಲ್ಲಿ ಕಾಣುತ್ತವೆ. ಬಹುಶಃ ಅರ್ಮಾನ್ ಹಾಗೂ ಕೃತಿಕಾ ಇದನ್ನು ಮರೆತಂತೆ ಇದೆ. ಇಬ್ಬರೂ ಮನೆ ಒಳಗೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ಪ್ರತಿಯೊಬ್ಬರು ಖಂಡಿಸುತ್ತಿದ್ದಾರೆ.
ಬಿಗ್ ಬಾಸ್ ಕಾರ್ಯಕ್ರಮವನ್ನು ಲಕ್ಷಾಂತರ ಮಂದಿ ನೋಡುತ್ತಿರುತ್ತಾರೆ. ಅವರಿಬ್ಬರು ಪತಿ-ಪತ್ನಿ ಎಂದ ಮಾತ್ರಕ್ಕೆ ಕಾರ್ಯಕ್ರಮದಲ್ಲಿ ಎಲ್ಲವನ್ನೂ ಮಾಡೋಕೆ ಹಕ್ಕಿದೆ ಎಂದರ್ಥವಲ್ಲ’ ಎಂದು ಕೆಲವರು ಆಕ್ರೋಶ ಹೊರ ಹಾಕಿದ್ದಾರೆ. ‘ಇಬ್ಬರನ್ನೂ ಮನೆಯಿಂದ ಈಗಲೇ ಹೊರಹಾಕಿ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ‘ಬಿಗ್ ಬಾಸ್ ಹೆಸರನ್ನು ಹಾಳುವ ಮಾಡುವ ಕೆಲಸ ನಡೆಯುತ್ತಿದೆ’. ‘ಸಲ್ಮಾನ್ ಖಾನ್ ಶೋ ನಡೆಸುತ್ತಿದ್ದರೆ ಈ ರೀತಿ ಆಗುತ್ತಿರಲಿಲ್ಲ’ ಎಂದಿದ್ದಾರೆ.
ಅರ್ಮಾನ್ ಮಲಿಕ್ಗೆ ಇಬ್ಬರು ಪತ್ನಿಯರು. ಪಾಯಲ್ ಹಾಗೂ ಕೃತಿಕಾ ಎಂಬುದು ಅವರ ಹೆಸರು. ಈ ಮೂವರು ಬಿಗ್ ಬಾಸ್ ಮನೆಗೆ ಬಂದಿದ್ದರು. ಈ ಪೈಕಿ ಕೃತಿಕಾ ಎಲಿಮಿನೇಟ್ ಆಗಿದ್ದು, ಪಾಯಲ್ ಹಾಗೂ ಅರ್ಮಾನ್ ಉಳಿದುಕೊಂಡಿದ್ದಾರೆ. ಮನೆಯಿಂದ ಹೊರ ಹೋದ ಬೆನ್ನಲ್ಲೇ ಪತಿಗೆ ವಿಚ್ಛೇದನ ಕೊಡೋದಾಗಿ ಪಾಯಲ್ ಘೋಷಿಸಿದ್ದಾರೆ.