ಲಂಡನ್: ಲೈಂಗಿಕ ದೌರ್ಜನ್ಯ ಮೊಕದ್ದಮೆಯೊಂದರಲ್ಲಿ ಸಿಲುಕಿದ್ದ ಅಮೆರಿಕ ನಟ ಕೆವಿನ್ ಸ್ಪೇಸಿ ಅವರನ್ನು ಬ್ರಿಟನ್ ನ್ಯಾಯಾಲಯ ದೋಷಮುಕ್ತಗೊಳಿಸಿದೆ.
ಆಸ್ಕರ್ ಪ್ರಶಸ್ತಿ ಪುರಸ್ಕೃತ ನಟ ಕೆವಿನ್ ಅವರು 2001ರಿಂದ 2013ರ ಅವಧಿಯಲ್ಲಿ ನಾಲ್ವರು ಪುರುಷರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಒಂಬತ್ತು ಪ್ರಕರಣಗಳು ದಾಖಲಾಗಿದ್ದವು. 12 ಗಂಟೆಗಳ ಕಾಲ ಸುದೀರ್ಘ ವಿಚಾರಣೆ ಬಳಿಕ ಲಂಡನ್ ನ್ಯಾಯಾಲಯವೊಂದು ಅವರನ್ನು ದೋಷಮುಕ್ತಗೊಳಿಸಿದೆ.
ಇದನ್ನೂ ಓದಿ : ಇನ್ಮುಂದೆ ರಷ್ಯಾದಲ್ಲಿ ಲಿಂಗ ಬದಲಾವಣೆಗೆ ಅವಕಾಶವಿಲ್ಲ..!