ಕಮಲನಗರ ತಾಲೂಕಿನ ಪ್ರೌಢ ಶಾಲೆ ವಿದ್ಯಾರ್ಥಿನಿಗೆ ಶಿಕ್ಷಕನೊಬ್ಬ ಲೈಂಗಿಕ ಕಿರುಕುಳ ನೀಡಿದ ಘಟನೆ ಕಮಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾಮುಕ ಶಿಕ್ಷಕನನ್ನು ಪೋಕ್ಸೋ ಕಾಯ್ದೆಯಡಿ ಬಂಧನ ಮಾಡಲಾಗಿದೆ. ಮಾಧವ್ ಲಾಂಚಕರ್ ಎಂಬುವನೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕ.
ಬಾಲಕಿಯ ತಂದೆಯ ದೂರಿನ ಮೇರೆಗೆ ಶಿಕ್ಷಕನ ವಿರುದ್ಧ ಪೋಕ್ಸೋ ಮತ್ತು ಐಪಿಸಿ 354(a) ಪ್ರಕಾರ ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೇಯ ಕೃತ್ಯ ಎಸಗಿದ ಶಿಕ್ಷಕನ ಜತೆಗೆ ಇದಕ್ಕೆ ಸಹಕರಿಸಿದ ಓರ್ವ ಶಿಕ್ಷಕಿಯನ್ನು ಜಗದೇವಿಗೆ ಸಹ ಬಂಧಿಸಲಾಗಿದೆ. ಗ್ರಾಮದ ಶಾಲೆಯಲ್ಲಿ 9 ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಯನ್ನು ಮತ್ತು ಆಕೆಯ ಗೆಳತಿಯನ್ನು ತನ್ನ ಕೋಣೆಗೆ ಬರುವಂತೆ ಕರೆದಿದ್ದ ಶಿಕ್ಷಕನಂತರ ಗೆಳತಿಯನ್ನು ವಾಪಸ್ ಕಳುಹಿಸಿದ್ದ. ವಿದ್ಯಾರ್ಥಿನಿಯನ್ನು ಕೋಣೆ ಒಳಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ. ಶಿಕ್ಷಕನ ವರ್ತನೆಗೆ ಹೆದರಿದ ಬಾಲಕಿ ಅತನಿಂದ ಬಿಡಿಸಿಕೊಂಡು ಅಳುತ್ತಾ ಮನೆಗೆ ಬಂದು, ತನ್ನ ತಂದೆಗೆ ಮಾಹಿತಿ ನೀಡಿದ್ದಾಳೆ.
ಶೀಕ್ಷಕ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿರುವ ಘಟನೆ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಆರ್ ದೊಡ್ಡಿ.ಶಾಲೆಗೆ ಭೆಟಿ ನೀಡಿ ಪೋಷಕರ ಹಾಗೂ ಎಸ್ ಡಿ ಎಂ ಸಿ ಸದಸ್ಯರ ಜತೆ ಚರ್ಚೆಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಟಿ ಆರ್ ದೊಡ್ಡಿ ಮಾತನಾಡಿ ವಿದ್ಯಾರ್ಥಿನಿಗೆ ನ್ಯಾಯ ಸಿಗಬೇಕು. ಶಾಲಾ ಶಿಕ್ಷಣ ಆಯಕ್ತ ಮತ್ತು ಡಿಡಿಪಿಐ ಅವರಿಗೆ ಅಮಾನತುಗೊಳಿಸುವಂತೆ ಶಿಫಾರಸು ಮಾಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.