ಹ್ಯಾಂಗ್ಜೂ: ಚೀನಾದ ಹ್ಯಾಂಗ್ಜೂನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ (Asian Games 2023) ಭಾರತೀಯ ಮಹಿಳಾ ತಂಡದ ಆಟಗಾರ್ತಿ ಶಫಾಲಿ ವರ್ಮಾ (Shafali Verma) ಹೊಸ ಇತಿಹಾಸ ಸೃಷ್ಟಿಸಿದ್ದಾರೆ
ಹ್ಯಾಂಗ್ಜೂನ ಪಿಂಗ್ಫೆಂಗ್ ಕ್ಯಾಂಪಸ್ ಕ್ರಿಕೆಟ್ ಮೈದಾನದಲ್ಲಿಂದು (ಗುರುವಾರ) ನಡೆದ ಪಂದ್ಯದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಮತ್ತು ಮಲೇಷ್ಯಾ ಮಹಿಳಾ ಕ್ರಿಕೆಟ್ (Malaysia Womens Team) ತಂಡಗಳ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಆದ್ರೆ ಈ ಪಂದ್ಯದಲ್ಲಿ ಮೊದಲು ಕ್ರೀಸ್ಗಿಳಿದ ಟೀಂ ಇಂಡಿಯಾ ಪರ ಶಫಾಲಿ ವರ್ಮಾ 31 ಎಸೆತಗಳಲ್ಲಿ 51 ರನ್ ಬಾರಿಸುವ ಮೂಲಕ ಏಷ್ಯನ್ ಗೇಮ್ಸ್ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಆರಂಭಿಕರಾಗಿ ಕಣಕ್ಕಿಳಿದ ಶಫಾಲಿ ವರ್ಮಾ 171.79 ಸ್ಟ್ರೈಕ್ರೇಟ್ ಬ್ಯಾಟ್ ಬೀಸಿ 39 ಎಸೆತಗಳಲ್ಲಿ 67 ರನ್ (5 ಸಿಕ್ಸರ್, 4 ಬೌಂಡರಿ) ಚಚ್ಚಿದರು. ಈ ಮೂಲಕ ಏಷ್ಯನ್ ಗೇಮ್ಸ್ ಕ್ರಿಕೆಟ್ ಇತಿಹಾಸದಲ್ಲಿ ಅರ್ಧಶತಕ ಸಿಡಿಸಿದ ಮೊದಲ ಮಹಿಳಾ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾದರು.
ಈ ಗುರಿ ಬೆನ್ನಟ್ಟಿದ ಮಲೇಷ್ಯಾ ಇನಿಂಗ್ಸ್ ಆರಂಭಿಸುತ್ತಿದ್ದಂತೆಯೇ ಮತ್ತೆ ಮಳೆ ಸುರಿಯಲಾರಂಭಿಸಿತು. ಮಲೇಷ್ಯಾ ತಂಡ ಕೇವಲ ಎರಡು ಎಸೆತಗಳನ್ನು ಎದುರಿಸಿದ್ದಾಗ ಮಳೆ ಆರಂಭವಾಯಿತು. ಭಾರೀ ಮಳೆಯ ಕಾರಣ ಪಂದ್ಯವು ಫಲಿತಾಂಶವಿಲ್ಲದೆ ರದ್ದಾಯಿತು. ಭಾರತ ಉತ್ತಮ ರನ್ರೇಟ್ ಹೊಂದಿದ್ದ ಕಾರಣ ಸೆಮಿಫೈನಲ್ ಪ್ರವೇಶಿಸಿತು.