ಇತ್ತೀಚೆಗೆ ಕತಾರ್ ನಿಂದ ಎಂಟು ಭಾರತೀಯ ನೌಕಾಪಡೆಯ ಸಿಂಬ್ಬಂದಿಗಳು ಬಿಡುಗಡೆಯಾಗಿದ್ದರು. ಇದರಲ್ಲಿ ಶಾರುಖ್ ಖಾನ್ ಪಾತ್ರವಿದೆ ಎಂದು ಸುದ್ದಿ ಹರಿದಾಡಿತ್ತು. ಆದರೆ ಈ ಬಗ್ಗೆ ಸ್ಪಷ್ಟಪಡಿಸಿರುವ ಶಾರುಖ್ ಖಾನ್ ಕಚೇರಿ ಸಿಬ್ಬಂದಿ, ಇದರಲ್ಲಿ ಕಿಂಗ್ ಖಾನ್ದ್ದು ಯಾವುದೇ ರೀತಿಯ ಪಾತ್ರವಿಲ್ಲ ಎಂದಿದ್ದಾರೆ.
ಭಾರತದ ಎಂಟು ಮಂದಿ ಮಾಜಿ ನಾವಿಕರನ್ನು ಬೇಹುಗಾರಿಕೆ ಆರೋಪದ ಮೇಲೆ ಕತಾರ್ ಬಂಧಿಸಿತ್ತು. ಬಳಿಕ ಭಾರತ ಸರ್ಕಾರದ ಮಧ್ಯಸ್ಥಿಕೆಯ ನಂತರ ಬಿಡುಗಡೆಯಾಯಿತು. ಆದರೆ ಶಾರುಖ್ ಖಾನ್ ಇತ್ತೀಚೆಗೆ ಮಧ್ಯಪ್ರಾಚ್ಯ ದೇಶಕ್ಕೆ ಭೇಟಿ ನೀಡಿದ್ದರಿಂದ ಈ ವಿಷಯದಲ್ಲಿ ಅವರ ಪಾತ್ರವಿದೆ ಎಂದು ಸುದ್ದಿ ಕೇಳಿ ಬಂದಿತ್ತು.
ವರದಿಗಳನ್ನು ನಿರಾಕರಿಸಿದ ಶಾರುಖ್ ಮ್ಯಾನೇಜರ್ ಪೂಜಾ ದದ್ಲಾನಿ, ಶಾರುಖ್ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. “ಕತಾರ್ನಿಂದ ಭಾರತದ ನೌಕಾ ಅಧಿಕಾರಿಗಳನ್ನು ಬಿಡುಗಡೆ ಮಾಡುವಲ್ಲಿ ಶಾರುಖ್ ಖಾನ್ ಅವರ ಯಾವುದೇ ರೀತಿಯ ಪಾತ್ರವಿಲ್ಲ. ಘಟನೆಯಲ್ಲಿ ಶಾರುಖ್ ಖಾನ್ ಪಾಲ್ಗೊಳ್ಳುವಿಕೆಯ ಅಂತಹ ಯಾವುದೇ ಸಮರ್ಥನೆಗಳು ಆಧಾರರಹಿತವಾಗಿವೆ . ಈ ಯಶಸ್ವಿ ನಿರ್ಣಯದ ಕಾರ್ಯಗತಗೊಳಿಸುವಿಕೆಗೆ ಕಾರಣರಾದವರು ಭಾರತದ ಅಧಿಕಾರಿಗಳು ಮಾತ್ರ. ಈ ವಿಷಯದಲ್ಲಿ ಖಾನ್ ಅವರು ಯಾವುದೇ ರೀತಿಯಲ್ಲಿ ಭಾಗಿಯಾಗಿಲ್ಲ. ರಾಜತಾಂತ್ರಿಕತೆ ಮತ್ತು ರಾಜ್ಯಕಾರ್ಯವನ್ನು ಒಳಗೊಂಡಿರುವ ಎಲ್ಲಾ ವಿಷಯಗಳನ್ನು ನಮ್ಮ ಅತ್ಯಂತ ಸಮರ್ಥ ನಾಯಕರು ಉತ್ತಮವಾಗಿ ಕಾರ್ಯಗತಗೊಳಿಸುತ್ತಾರೆ. ಖಾನ್, ಇತರ ಅನೇಕ ಭಾರತೀಯರಂತೆ ನೌಕಾಪಡೆಯ ಅಧಿಕಾರಿಗಳು ಮನೆಯಲ್ಲಿ ಸುರಕ್ಷಿತವಾಗಿರುವುದಕ್ಕೆ ಸಂತೋಷಪಡುತ್ತಾರೆ ಮತ್ತು ಅವರಿಗೆ ಶುಭ ಹಾರೈಸುತ್ತಾರೆ” ಎಂದು ಉಲ್ಲೇಖಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ನಲ್ಲಿ, ಕತಾರ್ನ ನ್ಯಾಯಾಲಯವು ನಿವೃತ್ತ ಭಾರತೀಯ ನೌಕಾಪಡೆಯ ಎಲ್ಲಾ ಎಂಟು ಸಿಬ್ಬಂದಿಗೆ ಮರಣದಂಡನೆ ನೀಡಿತ್ತು. ಆದರೆ ಫೆಬ್ರವರಿ 12ರಂದು ಎಂಟು ಭಾರತೀಯ ನೌಕರರನ್ನು ಬಿಡುಗಡೆ ಗೊಳಿಸಿದೆ. ಜಲಾಂತರ್ಗಾಮಿ ಕಾರ್ಯಾಚರಣೆಯಲ್ಲಿ ಇವರು ರಾಷ್ಟ್ರದ ಮೇಲೆ ಬೇಹುಗಾರಿಕೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಆರೋಪದ ಮೇಲೆ ಕತಾರ್ ನ್ಯಾಯಾಲಯವು ಅವರಿಗೆ ಮರಣದಂಡನೆ ವಿಧಿಸಿತು. ಫೆಬ್ರವರಿ 12 ರಂದು, ಎಂಟು ಮಾಜಿ ನೌಕಾಪಡೆಯ ಅಧಿಕಾರಿಗಳಲ್ಲಿ ಏಳು ಮಂದಿ ಭಾರತಕ್ಕೆ ಮರಳಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.