ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರಿಗೆ 58 ವರ್ಷ ವಯಸ್ಸು. ಇಂದಿಗೂ ನಟ ಸಖತ್ ಎಂಗ್ ಎಂಡ್ ಎನರ್ಜಿಟಿಕ್ ಆಗಿದ್ದು ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇದೀಗ ಶಾರುಖ್ ತಾವು ದಿನದಲ್ಲಿ ಒಂದೇ ಒಂದು ಬಾರಿ ಮಾತ್ರವೇ ಊಟ ಮಾಡುತ್ತೇನೆ ಎಂದಿದ್ದಾರೆ.
ಶಾರುಖ್ ಅವರು ದಿ ಗಾರ್ಡಿಯನ್ಗೆನೀಡಿದ ಸಂದರ್ಶನದಲ್ಲಿ ‘ದಿನಕ್ಕೆ ಒಂದು ಊಟವನ್ನು ಮಾತ್ರ ಮಾಡುತ್ತೇನೆ. ಇದು ಯಾವುದೇ ಪಥ್ಯಕ್ಕಾಗಿ ಅಲ್ಲ, ಬದಲಿಗೆ ಇದು ನನ್ನ ಆಯ್ಕೆ’ ಎಂದಿದ್ದಾರೆ.
“ನಿತ್ಯ ನಾನು ಬೆಳಗ್ಗೆ 5 ಗಂಟೆಗೆ ಮಲಗುತ್ತೇನೆ. ಮಾರ್ಕ್ ವಾಲ್ಬರ್ಗ್ (American actor) ಎದ್ದಾಗ, ನಾನು ಮಲಗಲು ಹೋಗುತ್ತೇನೆ. ಶೂಟಿಂಗ್ ವೇಳೆ ಒಂಬತ್ತು ಅಥವಾ 10 ಗಂಟೆಗೆ ಎಚ್ಚರಗೊಳ್ಳುತ್ತೇನೆ. ಆದರೆ ನಾನು ರಾತ್ರಿ 2 ಗಂಟೆಗೆ ಮನೆಗೆ ಬಂದು ಸ್ನಾನ ಮಾಡಿ ಮಲಗುವ ಮೊದಲು ವ್ಯಾಯಾಮ ಮಾಡುತ್ತೇನೆ’ ಎಂದು ಹೇಳಿಕೊಂಡಿದ್ದಾರೆ.
‘ಚಿತ್ರರಂಗಕ್ಕೆ ಪ್ರವೇಶಿಸುವ ಮುನ್ನ “ಕ್ರೀಡಾಪಟು” ಆಗಬೇಕೆಂದುಕೊಂಡಿದ್ದೆ. ನಟನೆಯ ಆರಂಭದ ದಿನಗಳಲ್ಲಿ ಆಕ್ಷನ್ ಹೀರೋ ಆಗುವ ಕನಸನ್ನು ಸಹ ಹೊಂದಿದ್ದೆ. ಚಿತ್ರರಂಗಕ್ಕೆ ಪ್ರವೇಶಿಸುವ ವೇಳೆ ನಾನು ಅತ್ಲೀಟ್ ಆಗಿದ್ದೆ. ನನ್ನ ಜೀವನದ ಕನಸು ಸಿಕ್ಸ್ ಪ್ಯಾಕ್ ಹೊಂದುವುದು, ಬಿಳಿಯ ಬಟ್ಟೆಗಳನ್ನು ಧರಿಸುವುದು, ಪಕ್ಕದಲ್ಲಿ ಯುವತಿಯ ಮೇಲೆ ನನ್ನ ತೋಳಿಟ್ಟು ಕುಳಿತುಕೊಳ್ಳುವುದು, ನನ್ನ ಮುಖದ ಮೇಲೆ ರಕ್ತ, ಕೈಯಲ್ಲಿ ಗನ್ ಇರಬೇಕು. ಕೋಣೆಗೆ ಪ್ರವೇಶಿಸಿದಾಗ ನೀವು ಯಾರು ಎಂದು ಯಾರೋ ಹೇಳುತ್ತಾರೆ, ಆಗ ನಾನು ಅವರನ್ನು ಶೂಟ್ ಮಾಡುವುದು ನನ್ನ ಕನಸಾಗಿತ್ತು”ಎಂದು ಹೇಳಿಕೊಂಡಿದ್ದಾರೆ.