ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಅನುದಾನದ ಕೊರತೆ ಎದ್ದು ಕಾಣುತ್ತಿದ್ದು ಶಕ್ತಿಗಾಗಿ ಮೀಸಲಿಟ್ಟ ಹಣ ಖಾಲಿ ಖಾಲಿ ಯಾಗಿದ್ದು ಮಾರ್ಚ್ ತಿಂಗಳವರೆಗೆ ಅಂದಾಜಿಸಿದ್ದ 2800ಕೋಟಿ ರೂ. ಡಿಸೆಂಬರ್ ಅಂತ್ಯಕ್ಕೂ ಮೋದಲೆ ಮೀಸಲಿಟ್ಟ ಹಣ ಸಂಪೂರ್ಣ ಖಾಲಿಯಾಗಿ ಹೋಗಿದೆ.
ಈಗಾಗಲೇ 2,800ಕೋಟಿಯಲ್ಲಿ 2,778ಕೋಟಿ ಹಣ ಖಾಲಿಯಾಗಿದ್ದು ಯೋಜನೆ ಯಶಸ್ಸಿನ ಬೆನ್ನೆಲ್ಲೇ ಅನುಧಾನ ಕೊರತೆಯ ಅತಂಕ ಈಗ ಎಲ್ಲರನ್ನ ಕಾಡುತ್ತಿದೆ. ಯೋಜನೆ ಮುಂದುವರಿಯಲು ಸರ್ಕಾರ ಇನ್ನಷ್ಟು ಅನುಧಾನ ನೀಡೋದು ಅನಿವಾರ್ಯ ಉಂಟಾಗಿದ್ದು ಶಕ್ತಿಯೋಜನೆಗೆ ಶಕ್ತಿ ತುಂಬಲು ಅನುದಾನ ಬಿಡುಗಡೆ ಮಾಡೋದು ಅನಿವಾರ್ಯ ವಾಗಿ ಬಿಟ್ಟಿದೆ. ಸಾರಿಗೆ ಸಚಿವರಿಗೆ ತಲೆ ನೋವಾದ ಅನುದಾನ ಕೊರತೆ
ಯೋಜನೆ 10ವರ್ಷಗಳವರೆಗೆ ಮುಂದುವರೆಯಲಿದೆ ಎಂದಿದ್ದ ರಾಮಲಿಂಗಾರೆಡ್ಡಿಯವರು ಈಗ ಅನುದಾನದ ಕೊರೆ ಕಾಣುತ್ತಿದ್ದು ಸರ್ಕಾರ ಹಣ ಬಿಡುಗಡೆ ಮಾಡದೇ ಇದ್ರೆ ಸಾರಿಗೆ ನಿಗಮಕ್ಕೆ ಎದುರಾಗಲಿದೆ ಆರ್ಥಿಕ ಸಂಕಷ್ಟ
ರಾಜ್ಯದಲ್ಲಿ ಶಕ್ತಿ ಯೋಜನೆ ಜೂನ್ 11ರಂದು ಜಾರಿಯಾಗಿತ್ತು ಜೂನ್ 11ರಿಂದ ಡಿಸೆಂಬರ್ 17ವರೆಗೆ ಶಕ್ತಿಯೋಜನೆಯಡಿ ಬರೊಬ್ಬರಿ 31,73,48,773 ಮಹಿಳೆಯರು ಪ್ರಯಾಣಿಸಿದ್ದಾರೆ ಶಕ್ತಿಯೋಜನೆಯಡಿ ಪ್ರಯಾಣಿಸಿದ ಮಹಿಳೆಯರ ಟಿಕೆಟ್ ಮೌಲ್ಯ 2778,72,85,831
ಅನುದಾನದ ಬಿಡುಗಡೆ ಮಾಡದಿದ್ರೆ ಸಂಕಷ್ಟಕ್ಕೆ ಸಿಲುಕಲಿದೆ ಸಾರಿಗೆ ನಿಗಮಗಳು ಇದರಿಂದ ನೌಕರರ ಸಂಬಳಕ್ಕೂ ಕುತ್ತು ಬೀಳುವ ಸಾಧ್ಯತೆ ಎದ್ದು ಕಾಣುತ್ತಿದೆ.