ಬೆಂಗಳೂರು: ಕರ್ನಾಟಕ ಮಾತ್ರವಲ್ಲ ದೇಶದ ಬಹುತೇಕ ಸಾರ್ವಜನಿಕ ಸಾರಿಗೆ ಸಂಸ್ಥೆಗಳು ಮುಚ್ಚೋ ಸ್ಥಿತಿಗೆ ಬಂದು ನಿಂತಿವೆ. ನಷ್ಟದ ಮೇಲೆ ನಷ್ಟದಾಖಲಿಸ್ತಾ ಸಾಗ್ತಿವೆ. ಏರ್ ಇಂಡಿಯಾದಿಂದ ಹಿಡಿದು ಬಿಎಂಟಿಸಿವರೆಗೂ ಇದೇ ಕತೆ ಆಗಿತ್ತು. ಆದ್ರೆ ಇದೀಗ ಶಕ್ತಿ ಯೋಜನೆ ಜಾರಿ ಆಗಿ ಆರು ತಿಂಗಳ ಬಳಿಕ ಬೆಂಗಳೂರು ಜೀವನಾಡಿ ಲಾಭದ ಹಳಿಗೆ ಏರಿದೆ. ನಿತ್ಯ ಹಣ ಗಳಿಸ್ತಾ ಹೊಸ ಶಕೆ ಆರಂಭಿಸಿದೆ. ಹಾಗಾದ್ರೆ ಬಿಎಂಟಿಸಿ ಆರ್ಥಿಕವಾಗಿ ಸ್ಟಾಂಗ್ ಆಯ್ತು ಬನ್ನಿ ತೋರಿಸ್ತೀವಿ..
ದೇಶದ ಬಹುತೇಕ ಸಾರಿಗೆ ಸಂಸ್ಥೆಗಳು ಬಾಗಿಲು ಮುಚ್ಚೋ ಸ್ಥಿತಿಗೆ ಬಂದು ತಲುಪುತ್ತಿದೆ.ಜೊತೆಗೆ ರಾಜ್ಯದ ಸಾರಿಗೆ ನಿಗಮಗಳ ಆರ್ಥಿಕ ಸ್ಥಿತಿಯೂ ಹೆಚ್ಚೇನು ಸದೃಢ ಇರಲಿಲ್ಲ.ಈ ಮೊದಲು ಬರ್ತಿರೋ ಆದಾಯದಲ್ಲಿ ,ಡಿಸೇಲ್ ,ಬಿಡಿಭಾಗಗಳ ಖರೀದಿ,ನೌಕರರಿಗೆ ಸಂಬಳ ನೀಡೋಕ್ಕೂ ನಿಗಮಗಳ ಬಳಿ ದುಡ್ಡು ಇರಲಿಲ್ಲ. ಅಷ್ಟೋದು ದಿವಾಳಿ ಆಗಿದ್ವು ರಾಜ್ಯ ಸಾರಿಗೆ ನಿಗಮಗಳು.ಆದ್ರೆ ಸರ್ಕಾರ ಯಾವಾಗ ಗ್ಯಾರಂಟಿಗಳಲ್ಲಿ ಒಂದಾಗಿರೋ ಶಕ್ತಿ ಯೋಜನೆ ಅನುಷ್ಠಾನ ಮಾಡ್ತೋ ಆಗಿನಿಂದ್ಲೇ ನಿಗಮಗಳೀಗೆ ಬೂಸ್ಟರ್ ಡೋಸ್ ಸಿಕ್ಕಿದ್ದಂತೆ ಆಯ್ತು.
ಹೌದು..ಶಕ್ತಿ ಯೋಜನೆ ಜಾರಿ ಬಳಿಕ ಸಾರಿಗೆ ನಿಗಮಗಳು ಚೇತರಿಕೆ ಕಾಣ್ತಿದೆ.ಮುಚ್ಚೋ ಪರಿಸ್ಥಿತಿಯಲ್ಲಿದ್ದ ಬಿಎಂಟಿಸಿ ಅಂತೂ ಲಾಭದ ಟ್ರಾಕ್ನಲ್ಲಿ ಓಡ್ತಿದೆ.ನಿಜ. ಬಿಎಂಟಿಸಿ ಕೋವಿಡ್ ಬಳಿಕ ಇದೀಗ ಕಂಪ್ಲೀಟ್ ಲಾಭಕ್ಕೆ ತಿರುಗಿದೆ.ನಿತ್ಯ 5 ವರೆ ಕೋಟಿ ಗಳಿಕೆ ಮಾಡ್ತಿದೆ. ಇದ್ರಲ್ಲಿ ಮೂರು ಕೋಟಿಯಷ್ಟು ಆಪರೇಷನ್ ಕಾಸ್ಟ್ ಆಗ್ತಿದ್ರೆ ಉಳಿದ ಒಂದೂವರೆ ಕೋಟಿ ಉಳಿತಾಯ ಖಾತೆ ಸೇರ್ತಿದೆ.
ಈ ಮೊದಲು ರಾಜ್ಯ ಸರ್ಕಾರ ಬಿಎಂಟಿಸಿಗೆ ನಯಪೈಸೆ ಅನುದಾನ ನೀಡುತ್ತಿರಿಲ್ಲ. ಹೀಗಾಗಿ ಹಲವು ವರ್ಷದಿಂದ ನಷ್ಟವನ್ನೇ ಕಾಣುತ್ತಿತ್ತು. ಮೆಟ್ರೋ ಶುರುವಾದ ಬಳಿಕ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆ 25 ಲಕ್ಷಕ್ಕೆ ಇಳಿದಿತ್ತು. ಬಳಿಕ ಕೋವಿಡ್ ಸಮಯದಲ್ಲಿ ನಿಗಮ ಸಂಕಷ್ಟದ ಸುಳಿಗೆ ಸಿಲುಕಿತ್ತು. ಇನ್ನೇನು ನಿಗಮ ನಷ್ಟದ ಸುಳಿಗೆ ಸಿಲುಕಿ ಹೋಗುತ್ತೆ ಅನ್ನೋವಾಗ್ಲೇ ಸರ್ಕಾರದ ಶಕ್ತಿ ಯೋಜನೆ ಬಿಎಂಟಿಸಿ ಕೈಹಿಡಿದು ಮೇಲಿತ್ತಿದೆ.ಹೀಗಾಗಿ ಸದ್ಯ ಬಿಎಂಟಿಸಿ ಮತ್ತೆ ಮೇಲೆದ್ದು ನಿಂತಿದೆ. ಕಳೆದ ವರ್ಷ ಜನವರಿಯಲ್ಲಿ 3.5 ಕೋಟಿ ಇದ್ದ ಆದಾಯ ಸದ್ಯ ಇದೀಗ ಐದೂವರೆ ಕೋಟಿ ಆಗಿದೆ.