ಬೆಂಗಳೂರು: ರಾಜ್ಯದಲ್ಲಿ ಇದೀಗ ಎಲ್ಲಡೆ ಗ್ಯಾರಂಟಿಗಳ್ದೇ ಚರ್ಚೆ.ಈಗಾಗಲೇ ಜಾರಿಯಾಗಿರೋ ಗ್ಯಾರಂಟಿಗಳಿಗೆ ಅಂತೂ ಭರ್ಜರಿ ರೆಸ್ಪಾನ್ಸ್ ಸಿಗ್ತಿದೆ.ಉಚಿತ ಪ್ರಯಾಣ ಶುರುವಾದ್ಮೇಲೆ ಅಂತೂ ಮಹಿಳೆಯರ ಕಾಲು ಮನೆಯಲ್ಲಿ ನಿಲ್ಲುತ್ತಿಲ್ಲ. ದಿನದಿಂದ ದಿನಕ್ಕೆ ಸಾರಿಗೆ ಬಸ್ ಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗ್ತಿದ್ರೆ ಇತ್ತ ಗೃಹಜ್ಯೋತಿ ನೋಂದಾಣಿ ಸಂಖ್ಯೆ ಬರೋಬ್ಬರಿ 1 ಕೋಟಿ ಸನಿಹಕ್ಕೆ ಬಂದು ನಿಂತುಬಿಟ್ಟಿದೆ.
ಶಕ್ತಿ ಯೋಜನೆ ಸ್ತ್ರೀಯರ ಪ್ರಯಾಣಕ್ಕೆ ಬಲ ತುಂಬಿದ ಯೋಜನೆ.ಈ ಯೋಜನೆ ಆರಂಭವಾದ ಜೂನ್ 11ರಿಂದ ಬಸ್ಗಳು ಈಗಲೂ ರಶ್ ಆಗಿಯೇ ಓಡಾಡ್ತಿವೆ..ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಿದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಸ್ತ್ರೀಯರು ಸಾರಿಗೆ ಬಸ್ಗೆ ಶಕ್ತಿ ತುಂಬಿದ್ದಾರೆ. ಸರ್ಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ ಅವಕಾಶ ನೀಡಿದ ಪರಿಣಾಮ ಬಸ್ ಗಳೆಲ್ಲಾ ಫುಲ್ ರಶ್ ಆಗ್ತಿದೆ.ವಾರದಿಂದ ವಾರಕ್ಕೆ ಬಸ್ ಗಳಲ್ಲಿ ಓಡಾಟ ಮಾಡುವರ ಸಂಖ್ಯೆ ಹೆಚ್ಚಾಗ್ತಿದೆ.
ಹೌದು.. ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿ ಇವತ್ತಿಗೆ ಮೂರು ವಾರ ಆಯ್ತು. ಈ ಮೂರು ವಾರದಲ್ಲಿ 10 ಕೋಟಿಕ್ಕಿಂತ ಹೆಚ್ಚು ಪ್ರಯಾಣ ಬೆಳೆಸಿದ್ದಾರೆ. ಮಹಿಳೆಯರು ತವರು ಮನೆ, ಗಂಡನ ಮನೆ, ಬಂಧು ಬಳಗದವರು, ಪ್ರವಾಸಿ ತಾಣ, ಮತ್ತು ಪುಣ್ಯ ಕ್ಷೇತ್ರಗಳಲ್ಲಿ ದೇವರ ದರ್ಶನ ಮಾಡ್ತಿದ್ದಾರೆ.ಕಳೆದ ವೀಕೆಂಡ್ ಗೆ ಹೋಲಿಕೆ ಮಾಡಿದ್ರೆ ಈ ವಾರದ ವೀಕೆಂಡ್ ನಲ್ಲಿ ಅತಿ ಹೆಚ್ಚು ಮಹಿಳೆಯರು ಬಸ್ ಗಳಲ್ಲಿ ಓಡಾಟ ನಡೆಸಿದ್ದಾರೆ, ನಾಲ್ಕು ಸಾರಿಗೆ ನಿಗಮಗಳ ಬಸ್ ಗಳಲ್ಲಿ ಪ್ರಯಾಣಿಕೆರ ಸಂಖ್ಯೆ ಹೆಚ್ಚಿದ್ದು, ಶಕ್ತಿ ಯೋಜನೆ ಜಾರಿಯಾದ ಮೂರನೇ ವೀಕೆಂಡ್ ನಲ್ಲೂ ಮಹಿಳೆಯರ ಪ್ರಯಾಣ ಜೋರಾಗಿದೆ. ಕಳೆದ ವಾರಕ್ಕೆ ಹೋಲಿಕೆ ಮಾಡಿದ್ರೆ ಈ ವಾರ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಕಳೆದ ಶನಿವಾರ 58 ಲಕ್ಷ ಮಹಿಳಾ ಪ್ರಯಾಣಿಕರು ಸಂಖ್ಯೆ ದಾಟಿತ್ತು.ಆದ್ರೆ ಈ ಶನಿವಾರ ಅಂದ್ರೆ ನಿನ್ನೆ ಬಿಎಂಟಿಸಿ ಕೆಎಸ್ಆರ್ಟಿಸಿ ಸೇರಿ ನಾಲ್ಕು ಸಾರಿಗೆ ನಿಗಮಮಗಲ್ಲಿ ಒಂದು ಕೋಟಿ 10 ಲಕ್ಷ ಪ್ರಯಾಣಿಕರು ಓಡಾಟ ನಡೆಸಿದ್ರಲ್ಲಿ 63 ಲಕ್ಷ 27 ಸಾವಿರ ಮಹಿಳೆಯರೇ ಓಡಾಟ ಮಾಡಿದ್ದಾರೆ. ಕಳೆದ ವಾರಕ್ಕಿಂತ ಈ ವಾರ ಐದು ಲಕ್ಷಕ್ಕೂ ಹೆಚ್ಚು ಮಂದಿ ಓಡಾಟ ಮಾಡಿದ್ದಾರೆ. ಕಳೆದ ಶನಿವಾರ 13 ಕೋಟಿ 14 ಲಕ್ಷ ಅದಾಯ ಬಂದಿದ್ರೆ ಈ ಶನಿವಾರ ಅಂದ್ರೆ ನಿನ್ನೆ 14 ಕೋಟಿ 82 ಲಕ್ಷ ಆದಾಯ ಬಂದಿದೆ.
ಇನ್ನೂ ಶಕ್ತಿ ಯೋಜನೆಗೆ ಸಿಗ್ತಿರೋ ರೆಸ್ಪಾನ್ಸ್ ಗೃಹಜ್ಯೋತಿಗೂ ಸಿಗ್ತಿದೆ. ಜೂನ್ 18 ರಿಂದ ಗೃಹಜ್ಯೋತಿ ನೋಂದಾಣಿಗೆ ಸರ್ಕಾರ ಅವಕಾಶ ಕೊಟ್ಟಿದೆ. ಕಳೆದ 13 ದಿನದಿಂದ ಗೃಹಜ್ಯೋತಿಗೆ 90 ಲಕ್ಷ 65 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಉಚಿತ ವಿದ್ಯುತ್ ಗೆ ನೋಂದಾಣಿ ಆಗಿದ್ದಾರೆ. ಬೆಸ್ಕಾಂ ವ್ಯಾಪ್ತಿಯಲ್ಲೇ 37 ಲಕ್ಷಕ್ಕೂ ಹೆಚ್ಚು ಗ್ರಾಹಕರು ಗೃಹಜ್ಯೋತಿ ಯೋಜನೆ ಪಡೆಯಲು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇನ್ನೂ ಉಚಿತ ವಿದ್ಯುತ್ ಪಡೆಯಲು ನೋಂದಾಣಿ ಅಗತ್ಯವಿದ್ದು, ಕೂಡಲೇ ಫಲಾನುಭವಿಗಳು ನೋಂದಾಣಿ ಮಾಡಿಕೊಂಡು ಯೋಜನೆ ಲಾಭ ಪಡೆಯಿರಿ ಅಂತ ಇಂಧನ ಸಚಿವ ಕೆಜೆ ಜಾರ್ಜ್ ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ಫ್ರೀ ಬಸ್ ಘೋಷಣೆ ಬಳಿಕ ವೀಕೆಂಡ್ ನಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗ್ತಿದೆ. ಹೀಗಾಗಿ ಬಸ್ ನಲ್ಲಿ ದಟ್ಟನೆ ಹೆಚ್ಚಾಗ್ತಿದೆ. ಮಹಿಳೆಯರನ್ನ ನಿಯಂತ್ರಣ ಮಾಡೋದು ನಿಗಮಗಳಿಗೆ ತಲೆನೋವು ತಂದಿದೆ. ಮತ್ತೊಂದೆಡೆ ಉಚಿತ ವಿದ್ಯುತ್ ಈ ತಿಂಗಳಿಂದ ಕೌಂಟಿಂಗ್ ಆಗ್ತಿದ್ದು, ನೋಂದಾಣಿ ಮುಂದಾಗ್ತಿದ್ದಾರೆ.ಉಚಿತ ವಿದ್ಯುತ್ ನಿಂದ ವಿದ್ಯುತ್ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇರೋದರಿಂದ ಮುಂದಿನ ಇಂಧನ ಇಲಾಖೆ ಇದನ್ನ ಹೇಗೆ ನಿಭಾಯಿಸುತ್ತೆ ಅನ್ನೋದನ್ನ ಕಾದುನೋಡಬೇಕಿದೆ.