ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ(Congress Government) ಮಹತ್ವಾಕಾಂಕ್ಷಿ ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ(Siddaramaiah) ಚಾಲನೆ ನೀಡಿದ್ದು ರಾಜ್ಯಾದ್ಯಂತ ಮಹಿಳೆಯರು ಫುಲ್ ಖುಷ್ ಆಗಿದ್ದಾರೆ ಶಕ್ತಿ ಸ್ಕೀಂ ಬಿಎಂಟಿಸಿಗೆ ಭಾರೀ ಬರೆ ಹಾಕುವ ಸಂಭವ ಎದುರಾಗಬಹುದು. ನಿನ್ನೆ ಫ್ರೀಂ ಬಸ್ ಜರ್ನಿ ಸ್ಕೀಂಗೆ ಚಾಲನೆ ಬೆನ್ನಲ್ಲೇ ಇಂದಿನಿಂದ ಬಿಎಂಟಿಸಿಗೆ ಶುರುವಾಯಿತು ಭಾರೀ ಟೆನ್ಷನ್.
ಶಕ್ತಿ ಯೋಜನೆಗೆ ತಗಲುವ ಹೊರೆಯನ್ನು ಸರ್ಕಾರ ಭರಿಸುವ ಭರವಸೆ.ಸರ್ಕಾರದ ಸಮಯಕ್ಕೆ ತಕ್ಕಂತೆ ಹಣ ಬಿಡುಗಡೆ ಮಾಡದಿದ್ರೆ ಬಿಎಂಟಿಸಿ ಪರಿಸ್ಥಿತಿ ಅಧೋಗತಿ.ಅನುದಾನ ವಿಳಂಬವಾದ್ರೆ ಬಸ್ಗಳಿಗೆ ಡೀಸೆಲ್ ಹೊರೆ ಭಾರ,ಮತ್ತೊಂದೆಡೆ ನೌಕರರ ವೇತನದ ಚಿಂತೆ.ಬೆಂಗಳೂರು ಜೀವನಾಡಿಗೆ ಸರ್ಕಾರದ ಶಕ್ತಿ ಅನುದಾನ್ದೇ ಹೊರೆಯಾಗಿಬಿಟ್ಟಿದೆ.
ಬಸ್ ಕಾರ್ಯಾಚರಣೆ ನಡುವೆಯೂ ನಿತ್ಯ ಡೀಸೆಲ್ ಗೂ ಹಣ ಒದಗಿಸುವದಕ್ಕೆ ಒದ್ದಾಡ್ತಿರೋ ಬಿಎಂಟಿಸಿ ನಿತ್ಯ ಕಾರ್ಯಾಚರಣೆ ಆದಾಯವನ್ನೇ ನಂಬಿ ನಿಗಮ ನಿರ್ವಹಣೆ ಪ್ರತಿ ನಿತ್ಯ 3.16 ಲಕ್ಷ , ಮಾಸಿಕ 94.80 ಲಕ್ಷ ಲೀಟರ್ ಡೀಸೆಲ್ ಬಿಎಂಟಿಸಿಗೆ ಬೇಕು ಬಿಪಿಸಿಎಲ್ ನಿಂದ ಡೀಸೆಲ್ ಖರೀದಿ ಮಾಡ್ತಿರೋ ಬಿಎಂಟಿಸಿ ಈಗಾಗಲೇ ನಷ್ಟದಿಂದ ಬಿಪಿಸಿಎಲ್ಗೆ ಕೋಟಿ ಕೋಟಿ ಬಾಕಿ ಉಳಿಸಿಕೊಂಡಿರೋ ನಿಗಮ ನಿತ್ಯ ಬಿಎಂಟಿಸಿಗೆ 2.5 ರಿಂದ 3 ಕೋಟಿ ನಷ್ಟು ಡೀಸೆಲ್ಗೆ ಹಣಗೆ ಬೇಕು ಇನ್ಮೇಲೆ ಫ್ರೀ ಬಸ್ ಸ್ಕೀಂನಿಂದ ಬಿಎಂಟಿಸಿಗೆ ಅರ್ದದಷ್ಟು ಕಾರ್ಯಾಚರಣೆಯ ಆದಾಯ ಮಾತ್ರ ಬರಲಿದೆ ಹೀಗಾಗಿ ಬರೋ ಆದಾಯದಲ್ಲಿ ಬಸ್ ಗಳ ನಿರ್ವಹಣೆ ಕಷ್ಟ..
ತಿಂಗಳಿಗೊಮ್ಮೆ ಸರ್ಕಾರ ಹಣ ಬಿಡುಗಡೆ ಮಾಡಿದ್ರೂ ನಿರ್ವಹಣೆ ಸವಾಲು. ಹೀಗಾಗಿ ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಕೆ ಹಣ ಬಿಡುಗಡೆ ಗೆ ಬಿಎಂಟಿಸಿ ಒತ್ತಾಯ ಕಾರ್ಯಾಚರಣೆ ನಡುವೆಯೂ ಡೀಸೆಲ್ ,ಹಾಗೂ ಬಿಡಿಭಾಗಗಳ ಖರೀದಿಗೆ ದುಡ್ಡು ಇಲ್ಲದೆ ಹೆಣಗಾಟ ಹೀಗಾಗಿ ಬರುತ್ತಿರೋ ಆದಾಯದಲ್ಲಿ ಒಂದು ತಿಂಗಳ ಕಾರ್ಯಾಚರಣೆ ವೆಚ್ಚ ಸರಿದೂಗಿಸಲು ಸವಾಲು. ತಿಂಗಳ ಅಂತ್ಯದವರೆಗೂ ಬಸ್ ಓಡಿಸೋದು ಕಷ್ಟಕರ ಎನ್ನಿತ್ತಿರುವ ಬಿಎಂಟಿಸಿ ಅಧಿಕಾರಿಗಳು