ರೈತರೊಬ್ಬರಿಗೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಸ್ವಯಂ ಪ್ರೇರಿತವಾಗಿ ಜಿ.ಟಿ ಮಾಲ್ ಬಂದ್ ಮಾಡುವ ನಿರ್ಧಾರವನ್ನು ಮಾಲೀಕ ಪ್ರಶಾಂತ್ ಕೈಗೊಂಡಿದ್ದಾರೆ.
ಳೆದ ಎರಡು ದಿನಗಳ ಹಿಂದೆಯಷ್ಟೇ ಹಾವೇರಿ ಮೂಲದ ರೈತ ಫಕೀರಪ್ಪ ಅವರಿಗೆ ಅಪಮಾನ ಮಾಡಿರುವ ಘಟನೆ ಬೆಳಕಿಗೆ ಬಂದಿತ್ತು.
ಪಂಚೆ ಧರಿಸಿ ಬಂದಿದ್ದಕ್ಕೆ ಸಿಬ್ಬಂದಿ ಮಾಲ್ ಒಳಗೇ ಬಿಡದೇ ಅಪಮಾನ ಮಾಡಿದ್ದರು. ಈ ಪ್ರಕರಣ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೇ ವಿಧಾನಸಭೆಯ ಅಧಿವೇಶನದಲ್ಲೂ ಸಚಿವ ಬೈರತಿ ಸುರೇಶ್ ಅವರು ಮಾಲ್ ಮುಚ್ಚಿಸುತ್ತೇವೆ ಎಂದು ಪ್ರಸ್ತಾಪಿಸಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ಮಾಲೀಕರು ಸ್ವಯಂಪ್ರೇರಿತವಾಗಿ ಮಾಲ್ ಬಂದ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.
ಹಾಗೆ ಜಿ.ಟಿ ಮಾಲ್ ಮಾಲೀಕ ಪ್ರಶಾಂತ್ ನಮ್ಮ ಮಾಲ್ನಲ್ಲಿ ಆಗಬಾರದಂತಹ ಘಟನೆ ಆಗಿದೆ. ಅದು ಹೊಸ ಸಿಬ್ಬಂದಿಯಿಂದ ಆಗಿದೆ. ನಾನು ಮಾಲ್ ಮಾಲೀಕನಾಗಿ ಆ ಘಟನೆ ಬಗ್ಗೆ ಕ್ಷಮೆ ಕೇಳುತ್ತೇನೆ. ಇದನ್ನ 2 ದಿನಗಳ ಹಿಂದೆಯೇ ಕ್ಷಮೆ ಕೇಳಬೇಕಾಗಿತ್ತು. ನಮ್ಮ ತಂದೆ ಅನಾರೋಗ್ಯದ ವಿಚಾರವಾಗಿ ಸ್ಪಲ್ವ ಆಸ್ಪತ್ರೆಯಲ್ಲಿದ್ದೆವು. ರೈತ ಫಕೀರಪ್ಪ ಅವ್ರಿಗೆ ನಮ್ಮಿಂದ ಆಗಿರೋದ ತಪ್ಪು. ನನ್ನ ತಂದೆ ಕೂಡ ಫಕೀರಪ್ಪ ಜೊತೆಗೆ ಫೋನ್ ಕಾಲ್ ಮಾಡಿ ಕ್ಷಮೆ ಕೇಳಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ಬಿಬಿಎಂಪಿಯಿಂದ
ನೋಟಿಸ್ ಬಂದಿದೆ. ಆದ್ರೆ ಮಾಲ್ ಬಂದ್ ಮಾಡುವಂತೆ ಹೇಳಿಲ್ಲ. ಘಟನೆ ಬಗ್ಗೆ ವರದಿ ನೀಡಿ ಎಂದು ನೀಡಿದ್ದಾರೆ ಎಂದರು. ಇದೇ ವೇಳೆ ಮಾಲ್ ತೆರಿಗೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 1 ವರ್ಷದ ತೆರಿಗೆ ಬಾಕಿಯಿದೆ. 1.70 ಕೋಟಿ ರೂ. ಬಾಕಿ ಇದೆ. ಆದ್ರೆ ತೆರಿಗೆ ವಿಚಾರಕ್ಕೂ ಮಾಲ್ ಬಂದ್ ಮಾಡುತ್ತಿಲ್ಲ. ನಮ್ಮ ಕಡೆಯಿಂದ ತಪ್ಪಾಗಿದೆ, ಹಾಗಾಗಿ ನಾವು ಮಾಲ್ ಕ್ಲೋಸ್ ಮಾಡ್ತಿದ್ದೇವೆ. 24 ಗಂಟೆಗಳಲ್ಲಿ ಉತ್ತರ ನೀಡುವಂತೆ ಹೇಳಿದ್ದಾರೆ. ನಾವು ಇನ್ನೂ ಎರಡ್ಮೂರು ದಿನ ಮಾಲ್ ಕ್ಲೋಸ್ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ