ಈಜಿಪ್ಟ್: ಇಲ್ಲಿನ ಪ್ರಸಿದ್ಧ ರೆಡ್ ಬೀಚ್ ರೆಸಾರ್ಟ್ ನಲ್ಲಿ ಶಾರ್ಕ್ ವೊಂದು 23 ವರ್ಷದ ರಷ್ಯಾದ ಪ್ರವಾಸಿಗನನ್ನು ತನ್ನ ತಂದೆಯ ಮುಂದೆಯೇ ಕೊಂದು ತಿಂದಿರುವ ಘಟನೆ ನಡೆದಿದ್ದು ಇದರಿಂದ ಜನ ಕಂಗಾಲಾಗಿದ್ದಾರೆ.
ಈ ಭಯಾನಕ ದೃಶ್ಯ ಕಂಡು ಜನ ಭಯಭೀತರಾಗಿದ್ದು ಮಗನನ್ನು ರಕ್ಷಿಸುವಂತೆ ತಂದೆ ಜೋರಾಗಿ ಕೂಗುತ್ತಿರುವುದು ವಿಡಿಯೋದಲ್ಲಿ ಕೇಳಿ ಬಂದಿದೆ. ಆದರೆ ಕ್ಷಣಾರ್ದದಲ್ಲಿ ಶಾರ್ಕ್ ಆತನನ್ನು ತಿಂದು ಮುಗಿಸಿದೆ. ಶಾರ್ಕ್ ಅವನನ್ನು ಪದೇ ಪದೇ ನೀರಿಗೆ ಎಸೆಯುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆತ ಈಜಲು ಪ್ರಾರಂಭಿಸಿದಾಗ ಆತನನ್ನು ಶಾರ್ಕ್ ತನ್ನ ಕಡೆಗೆ ಎಳೆಯುವುದು ವೀಡಿಯೊದಲ್ಲಿ ಕಂಡುಬರುತ್ತದೆ. ಹೀಗೆ ದೃಶ್ಯದಲ್ಲಿ ಸ್ವಲ್ಪ ಸಮಯದಲ್ಲೇ ಶಾರ್ಕ್ ಆತನ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ.
23 ವರ್ಷದ ವ್ಲಾದಿಮಿರ್ ಪೊಪೊವ್ ಈಜಲು ಹೋಗಿದ್ದರು. ಆಗ ಹುಲಿ ಶಾರ್ಕ್ ಅವನನ್ನು ನೀರಿನಲ್ಲಿ ಕೊಂದಿದೆ. ಅಷ್ಟರಲ್ಲಿ ಆತನ ಗೆಳತಿಯ ಪ್ರಾಣ ಉಳಿಸಲಾಗಿದೆ. ಆಕೆ ಪ್ರಾಣಾಪಾಯದಿಂದ ಪರಾರಿಯಾಗಿದ್ದು, ಪೊಪೊವ್ ಅವರ ತಂದೆ ಈ ಭೀಕರ ದಾಳಿಯನ್ನು ಬಹಳ ಹತ್ತಿರದಿಂದ ವೀಕ್ಷಿಸಿದ್ದಾರೆ. ಶಾರ್ಕ್ ಅವನನ್ನು ಹಿಡಿದಾಗ, ಅವರು ಕಿರುಚುತ್ತಾ ಅಳುತ್ತಾರೆ. ಆದರೆ ಆತನ ತಂದೆ ಕಣ್ಣ ಮುಂದೆ ಮಗನ ಪ್ರಾಣ ಹೋಗುತ್ತಿದ್ದರೂ ಆತನನ್ನು ಕಾಪಾಡಲು ಸಾಧ್ಯವಾಗಲಿಲ್ಲ. ಮಗ ಸಾಯುತ್ತಿರುವುದನ್ನು ಕಂಡು ತಂದೆ ಕುಸಿದುಬಿದ್ದಿದ್ದಾರೆ. ಸ್ವಲ್ಪ ಸಮಯದಲ್ಲೇ ಸಮುದ್ರದ ನೀರಿನ ಬಣ್ಣ ಕೆಂಪಾಗಿದೆ.
ಪೊಪೊವ್ ಕೆಲವೇ ತಿಂಗಳುಗಳ ಹಿಂದೆ ತನ್ನ ತಂದೆಯೊಂದಿಗೆ ಪ್ರವಾಸಕ್ಕಾಗಿ ಈಜಿಪ್ಟ್ ನ ಪ್ರಸಿದ್ಧ ರೆಸಾರ್ಟ್ಯೊಂದಕ್ಕೆ ತೆರಳಿದ್ದರು. ಅಲ್ಲಿ ತನ್ನ ಸಂಗಾತಿ ಹಾಗೂ ತಂದೆಯೊಂದಿಗೆ ಬೋಟಿಂಗ್ ಹೋಗಿದ್ದರು. ಈ ವೇಳೆ ಈಜಾಡಲು ನೀರಿಗೆ ಇಳಿದಿದ್ದು ಈ ಸಮಯವನ್ನು ಶಾರ್ಕ್ ಆತನನ್ನು ಕೊಂದು ತಿಂದಿದೆ.