ಸಿನಿಮಾ ರಂಗದಲ್ಲಿ ತಮ್ಮ ಮೇಲೆ ನಡೆಯುತ್ತಿರುವ ಕಾಸ್ಟಿಂಗ್ ಕೌಚ್ ಬಗ್ಗೆ ನಟಿಯರು ನಿರರ್ಗಲವಾಗಿ ಮಾತನಾಡುತ್ತಿದ್ದಾರೆ. ಈಗಾಗ್ಲೆ ಸಾಕಷ್ಟು ನಟಿಯರು ತಮಗಾದ ಅನುಭವಗಳನ್ನು ಹೇಳಿಕೊಂಡಿದ್ದಾರೆ. ಇದೀಗ ಮರಾಠಿ ಸಿನಿಮಾಗಳಲ್ಲಿ ಜನಪ್ರಿಯತೆ ಗಳಿಸಿರುವ ಸಾಯಿ ತಮ್ಹಂಕರ್ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಆಫರ್ ನೀಡಿ ನಿರ್ಮಾಪಕರ ಜೊತೆ ಮಲಗಲು ಹೇಳ್ತಾರೆ ಎಂದು ನಟಿ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನಟಿ, ಒಂದು ಬಾರಿ ನನಗೆ ಚಿತ್ರತಂಡದಿಂದ ಫೋನ್ ಕರೆ ಬಂದಿತ್ತು. ನಮ್ಮ ಚಿತ್ರಕ್ಕೆ ನೀವೇ ನಾಯಕಿ ಎಂದು ಹೇಳಿದರು. ಬಳಿಕ ಕತೆ ಬಗ್ಗೆ ವಿಚಾರಿಸಿದಾಗ ಇದಕ್ಕೂ ಮುನ್ನ ಒಮ್ಮೆ ನೀವು ನಿರ್ಮಾಪಕರ ಜೊತೆ ಮಲಗಬೇಕು ಎಂದರು. ನೀವಾಗಿರುವ ಕಾರಣ ಹೀರೋ ಜೊತೆ ಮಲಗಿ ಎಂದು ನಾನು ಹೇಳಲ್ಲ ಎಂದು ಹೇಳಿದ್ದರು.
ಅವರ ಆ ಮಾತು ನನಗೆ ಕೆರಳಿಸಿತ್ತು. ಕೊಡಲೇ ನಿಮ್ಮ ತಾಯಿಯನ್ನು ಅವರ ಜೊತೆ ಮಲಗಿಸಿ ಎಂದೆ. ಅವರ ಕಡೆಯಿಂದ ಉತ್ತರ ಬರಲಿಲ್ಲ. ಇನ್ನೋಮ್ಮೆ ಕಾಲ್ ಮಾಡಿದರೆ ನೆಟ್ಟಗೆ ಇರಲ್ಲ ಎಂದು ಗದರಿದೆ. ಆ ನಂತರ ಕರೆ ಬರಲಿಲ್ಲ ಎಂದು ನಟಿ ಹೇಳಿದ್ದಾರೆ.
ನಾವು ವಿರೋಧಿಸಿದರೆ, ಗಟ್ಟಿಯಾಗಿ, ಧೈರ್ಯದಿಂದ ಮಾತನಾಡಿದರೆ ಇಂತಹ ಸಂದರ್ಭಗಳಿಂದ ದೂರವಿರಬಹುದು. ಆದರೆ ಹಲವು ಬಾರಿ ಅವಕಾಶಗಳೇ ಸಿಗುವುದಿಲ್ಲ. ಹೀಗಾಗಿ ಹಲವರು ಈ ಟ್ರಾಪ್ನಲ್ಲಿ ಬೀಳುತ್ತಾರೆ. ಬಳಿಕ ಹೊರಬರಲಾರದೆ ಚಡಪಡಿಸುತ್ತಾರೆ. ಹಲವರು ಇದೇ ಕಾರಣದಿಂದ ಅವಕಾಶ ಕಳೆದುಕೊಳ್ಳುತ್ತಾರೆ. ಇಂಡಸ್ಟ್ರಿ ಬಿಟ್ಟು ಹೋಗುತ್ತಾರೆ. ಮತ್ತೆ ಕೆಲವರು ಎಲ್ಲದಕ್ಕೂ ಒಗ್ಗಿಕೊಂಡು ಇರಬೇಕಾಗುತ್ತದೆ. ಇದರ ನಡುವೆ ಧೈರ್ಯದಿಂದ ಸಾಧನೆ ಮಾಡಿದವರು ಇದ್ದಾರೆ ಎಂದು ಸಾಯಿ ತಿಳಿಸಿದ್ದಾರೆ.