ಬೆಂಗಳೂರು: ಕಾಂಗ್ರೆಸ್ ನನಗೆ ಮರುಜೀವ ಕೊಟ್ಟಿದೆ ನಾನು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ ಎಂದು ನೆನ್ನೆ ಬೆಳಗ್ಗೆ ಸಹ ನನ್ನೊಂದಿಗೆ ಅವರು ಹೇಳಿದ್ದರು. ಹಿರಿಯ ರಾಜಕೀಯ ನಾಯಕರು ಈಗ ಈ ರೀತಿ ಮಾಡಿರುವುದು ವಿಶ್ವಾಸಕ್ಕೆ ಧಕ್ಕೆ ತಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್ ಅಭಿಪ್ರಾಯಪಟ್ಟರು.
ನಗರದಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಜನ ಅವರನ್ನು ಮುವತ್ತು ಸಾವಿರ ಕ್ಕಿಂತ ಹೆಚ್ಚು ಮತಗಳಿಂದ ಅವರನ್ನು ತಿರಸ್ಕರಿಸಿದ್ದರು ಕಾಂಗ್ರೆಸ್ ಪಕ್ಷದವರು ಅತ್ಯಂತ ಗೌರವದಿಂದ ನಡೆಸಿಕೊಂಡಿದ್ದೇವೆ. ಇದೀಗ ಅವರು ಯಾವ ಕಾರಣದಿಂದ ಬಿಜೆಪಿ ಸೇರ್ಪಡೆಯಾಗಿದ್ದಾರೆ? ಯಾವ ಒತ್ತಡಕ್ಕೆ ಒಳಗಾಗಿ ಈ ತೀರ್ಮಾನ ಕೈಗೊಂಡಿದ್ದಾರೆ? ಎನ್ನುವುದರ ಬಗ್ಗೆ ಅವರು ಮೊದಲು ತಿಳಿಸಲು ಬಳಿಕ ನಾನು ಮಾತನಾಡುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ನನಗೆ ಇನ್ನೂ ಅವರ ರಾಜಿನಾಮೆ ಪತ್ರ ತಲುಪಿಲ್ಲ, ಕಾಂಗ್ರೆಸ್ ಪಕ್ಷದವರು ಅವರನ್ನು ಗೌರವಯುತವಾಗಿ ನಡೆಸಿಕೊಂಡಿದೆ. ಸದ್ಯ ಅವರು ಬಿಜೆಪಿಗೆ ಹೋಗಿದ್ದರೂ ಬೇರೆ ಯಾರು ನಮ್ಮ ಪಕ್ಷವನ್ನು ಬಿಟ್ಟುಹೋಗುವುದಿಲ್ಲ ಎಂದು ಅವರು ಹೇಳಿದರು.