ಶಿವಮೊಗ್ಗ: ದೇಶ, ಧರ್ಮದ್ರೋಹ ಮಾಡುವವರ ವಿರುದ್ಧ ನಿರಂತರ ಹೋರಾಟ ಮಾಡುತ್ತೇನೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ನಾನು ನೀಡಿರುವ ಹೇಳಿಕೆ ನೋಡಲಿ.
ಅವರು ಯಾರನ್ನೊ ತೃಪ್ತಿಪಡಿಸಲು ತಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಯಾರು ಪ್ರಚೋದನೆ ನೀಡಿದ್ದಾರೆ ಎಂಬುದು ತಿಳಿದಿಲ್ಲ. ದೇಶ, ಧರ್ಮದ್ರೋಹ ಮಾಡುವವರ ವಿರುದ್ಧ ನಿರಂತರ ಹೋರಾಟ ಮಾಡುತ್ತೇನೆ ಎಂದರು.
ನಗರದಲ್ಲಿ ಬಡವರಿಗೆ ನೀಡಲು ನಿರ್ಮಿಸಿರುವ ಆಶ್ರಯ ಮನೆಗಳ ವಿಷಯದಲ್ಲಿ ರಾಜಕಾರಣ ಮಾಡಲು ಇಷ್ಟಪಡುವುದಿಲ್ಲ. ಮೂಲಸೌಕರ್ಯ ಇಲ್ಲದ ಕಾರಣ ನೀಡಿ ಮನೆ ಹಂಚಿಕೆ ಮುಂದೂಡಲಾಗಿದೆ.
ಮನೆ ಹಂಚಿಕೆ ಮಾಡಿದರೆ ಸರಕಾರ ಮೂಲಸೌಲಭ್ಯ ಕಲ್ಪಿಸಲು ಮುಂದಾಗಬಹುದು ಎಂಬುದು ಶಾಸಕರ ಮನೋಭಾವ ಆಗಿರಬಹುದು. ಜಿಲ್ಲಾಉಸ್ತುವಾರಿ ಸಚಿವರು, ವಸತಿ ಸಚಿವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.