ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಬಂಧನದ ಬಳಿಕ ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರಗಿ ಒಂದಲ್ಲ ಒಂದು ಹೇಳಿಕೆ ಪೋಸ್ಟ್ ಮಾಡುತ್ತಲೇ ಇದ್ದಾರೆ. ಇದೀಗ ದರ್ಶನ್ ಕುರಿತಾದ ಹೊಸ ಪೋಸ್ಟ್ ಮಾಡಿರವ ಸಂಬರಗಿ ನಟ ಶಿವರಾಜ್ಕುಮಾರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಸಂದರ್ಶನವೊಂದರಲ್ಲಿ ಭಾಗಿಯಾದ ಪ್ರಶಾಂತ್ ಸಂಬರ್ಗಿ, ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ಶಿವರಾಜ್ ಕುಮಾರ್ ಸೈಲೆಂಟ್ ಆಗಿರುವುದು ಯಾಕೆ? ನಿಮ್ಮ ಮೌನ ಸಮ್ಮತಿ ಇದೆಯಲ್ಲ ಅದು ಎಲ್ಲೋ ಒಂದು ಕಡೆ ದುಷ್ಟರನ್ನು, ರೌಡಿಯನ್ನು ಬೆಳೆಸುತ್ತದ್ದೀರಾ ಎಂದು ನೇರ ಆಪಾದನೆ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಸಂದರ್ಶನವೊಂದರಲ್ಲಿ ಸಂಬರಗಿ ಮಾತನಾಡಿ ʻʻಶಿವರಾಜಕುಮಾರ್ ಅವರಲ್ಲಿ ನಾನು ಕೇಳುವುದು ಏನಂದರೆ ಈ ಘಟನೆಗೆ ನಿಮ್ಮ ಮೌನ ಸಮ್ಮತಿ ಸೂಚಿಸುತ್ತದೆ. ನೀವು ಈವರೆಗೂ ಒಂದೇ ಒಂದು ಮಾತನಾಡದೇ ಇರುವುದು ದರ್ಶನ್ ಮಾಡಿರುವ ಕರ್ಮಕಾಂಡಕ್ಕೆ ಸಮ್ಮತಿ ಸೂಚಿಸಿದಂತಾಗುತ್ತದೆ. ದರ್ಶನ್ ಅಟ್ಟಹಾಸಕ್ಕ ಮೊದಲು ನೀವು ಬಂದು ಮಾತನಾಡಬೇಕಿದೆ. ಅನೇಕ ಸಣ್ಣ ವಿಚಾರಗಳನ್ನು ಮಾತನಾಡುವ ನೀವು. ಈ ವಿಚಾರದಲ್ಲಿ ಸೈಲೆಂಟ್ ಆಗಿರುವುದು ಯಾಕೆ? ನಿಮ್ಮ ಮೌನ ಸಮ್ಮತಿ ಇದೆಯಲ್ಲ ಎಲ್ಲೋ ಒಂದು ಕಡೆ ದುಷ್ಟರನ್ನು, ರೌಡಿಯನ್ನು ಬೆಳೆಸುತ್ತದ್ದೀರಾ ಎಂದು ನೇರ ಆಪಾದನೆ ಮಾಡುತ್ತೇನೆ ಎಂದಿದ್ದಾರೆ. ಇನ್ನು ಹಲವು ಪೋಸ್ಟ್ಗಳನ್ನು ಮಾಡಿದ ಪ್ರಶಾಂತ್ ಸಂಬರಗಿ ಮತ್ತೊಂದು ದರ್ಶನ್ ವಿರುದ್ಧ ಪೋಸ್ಟ್ ಮಾಡಿದ್ದಾರೆ.
ಫ್ರೆಂಡ್ಸ್ ನೀವು ಗಮನಿಸಿ ಈ ಸೈಕೋ ವ್ಯಕ್ತಿಯ ಎಲ್ಲಾ ಟಿವಿ ಸಂದರ್ಶನಗಳು ಮತ್ತು ಸಾರ್ವಜನಿಕ ಜಾಲತಾಣ ದಲ್ಲಿ ಲಭ್ಯವಿರುವ ಫೋಟೋಗಳನ್ನು ಸರಿಯಾಗಿ ಗಮನಿಸಿ ,ಇವನ ಬಲಗೈ ನಲ್ಲಿ ಬ್ಯಾಂಡೇಜ್ ಇರತ್ತೆ ,ಯಾಕೆ ಅಂದ್ರೆ ಇವನ ಹಿಂದಿನ ರಾತ್ರಿ ಯಾರೋ ಬಡಪಾಯಿಗೆ ಇವನ ವಿಶ್ವ ರೂಪ ನೋಡಿಸಿರ್ತಾನೆ. ಇವನ ಈ ವಿಚಿತ್ರ ನಡವಳಿಕೆ, ರೌಡಿಸಿಮ್ ಕೃತ್ಯಗಳು,ಅನೇಕರ ಮೇಲೆ ಹಲ್ಲೆಗಳು ಎಷ್ಟೋ ಜನರು ನೋಡಿದ್ದರೆ ,ಈ ಹಿಂಸಾ ಕೃತ್ಯವನ್ನು ಹಲವಾರು ಬಾರಿ ಪೊಲೀಸ್ ದೂರಿನ ಮೂಲಕ ದಾಖಲಿಸಲಾಗಿದೆ ಮತ್ತು ಈ ರಾಕ್ಷಸನಿಂದ ಹಲ್ಲೆ ಮತ್ತು ನಿಂದನೆಗೊಳಗಾದ ಜನರ ಪಟ್ಟಿ ದಿನ ದಿನಕ್ಕೆ ಹನುಮಂತನ ಬಾಲ ತರ ಬೆಳಿತಾಯಿದೆ. ಇನೊಂದು ಈ ಸೈಕೋದ ವಿಚಿತ್ರ ನಡವಳಿಕೆ ಗೊತ್ತ?
ಹೇಳ್ತಿನಿ ಕೇಳಿ ಮಾಡೋದಲ್ಲ ಮಾಡ್ಬಿಟ್ಟು ಇವನು ಮರುದಿನ ಬೆಳಿಗ್ಗೆ ತನ್ನ ಕೊಳಕು ವರ್ತನೆಗೆ ಪಶ್ಚಾತ್ತಾಪ ಮಾಡ್ಕೊಂಡು ಅವನೇ ಖುದ್ದಾಗಿ ಹಲ್ಲೆ ಮಾಡಿದ ಬಲಿಪಶುವಿಗೆ ಮುಲಾಮು ಹಚ್ತಾನಂತೆ ಈ ಮುಲಾಮು ರಾಜಾ ,ಮತ್ತೆ ರಾತ್ರಿಯಲ್ಲಿ ಅದೇ ಕ್ರೂರ ದಾಳಿಯನ್ನು ಪುನರಾವರ್ತಿಸುತ್ತಾನೆ.
Dasa is psyco he needs treatment.
ಇವಾಗ ನೀವೇ ಹೇಳಿ ಇವನ್ನನ ಬಿಡಬೇಕಾ?.
ಒಂದ್ angle ನಲ್ಲಿ ನೋಡಿದ್ರೆ ಪಾಪ ಅನ್ಸತ್ತೆ. Dasa needs treatmentʼʼಎಂದು ಬರೆದುಕೊಂಡಿದ್ದಾರೆ.