ಅಕ್ಕಿನೇನಿ ಕುಟುಂಬದಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಸದ್ದಿಲ್ಲದೇ ನಾಗಚೈತನ್ಯ ಹಾಗೂ ಶೋಭಿತಾ ಮದುವೆಗೆ ತಯಾರಿ ನಡೆಯುತ್ತಿದೆ. ಈ ಜೋಡಿಯ ಮದುವೆ ಯಾವಾಗ ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಇದೇ ಡಿ.4ರಂದು ಹಸೆಮಣೆ ಏರೋದಕ್ಕೆ ಈ ಜೋಡಿ ಸಜ್ಜಾಗಿದೆ ಎನ್ನಲಾಗುತ್ತಿದೆ.
ಇತ್ತೀಚೆಗೆ ಸದ್ದಿಲ್ಲದೇ ಶೋಭಿತಾ ಜೊತೆ ನಾಗಚೈತನ್ಯ ಅವರ ನಿಶ್ಚಿತಾರ್ಥ ನಾಗಾರ್ಜುನ್ ಕುಟುಂಬದಲ್ಲಿ ನಡೆದಿತ್ತು. ಇದೇ ಡಿಸೆಂಬರ್ 4ರಂದು ಶೋಭಿತಾ ಜೊತೆ ಸಮಂತಾ ಮಾಜಿ ಪತಿ ನಾಗಚೈತನ್ಯ ಮದುವೆ ವಿದೇಶದಲ್ಲಿ ಜರುಗಲಿದೆ ಎನ್ನಲಾದ ಸುದ್ದಿಯೊಂದು ಹರಿದಾಡುತ್ತಿದೆ. ಆ ನಂತರ ಹೈದರಾಬಾದ್ನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಆದರೆ ಈ ಬಗ್ಗೆ ಕುಟುಂಬದಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.
ಈ ಹಿಂದೆ 2017ರಲ್ಲಿ ಸಮಂತಾ ಜೊತೆ ನಾಗಚೈತನ್ಯ ಮದುವೆಯಾಗಿದ್ದರು. ಹಿಂದೂ ಮತ್ತು ಕ್ರಿಶ್ಚಿಯನ್ ಪಪದ್ಧತಿಯಂತೆ ಈ ಮದುವೆ ನಡೆದಿದತ್ತು. ಆದರೆ ಕೆಲ ಮನಸ್ತಾಪಗಳಿಂದ 2021ರಲ್ಲಿ ಇಬ್ಬರೂ ಡಿವೋರ್ಸ್ ಪಡೆದು ದೂರ ದೂರವಾಗಿದ್ದು. ಇದೀಗ ಮೂರು ವರ್ಷಗಳ ಬಳಿಕ ನಾಗಚೈತನ್ಯ ಮತ್ತೆ ಮದುವೆಯಾಗಲು ರೆಡಿಯಾಗಿದ್ದಾರೆ.