ಬೆಂಗಳೂರು: ರಾಜ್ಯದಲ್ಲಿ ಮದ್ಯದ ಬೆಲೆ ಮತ್ತೆ ದುಬಾರಿಯಾಗಿದೆ. ರಾಜ್ಯ ಸರ್ಕಾರ ಉಚಿತ ಗ್ಯಾರಂಟಿಗಳ ಯೋಜನೆ ಜಾರಿಯಿಂದ ಉಂಟಾಗುವ ಹೊರೆಯನ್ನು ಸರಿದೂಗಿಸಲು ಅಬಕಾರಿ ವಲಯವನ್ನು ಅವಲಂಬಿಸಲಿದೆ ಎಂಬ ಅಭಿಪ್ರಾಯ ಕೆಲವು ದಿನಗಳ ಹಿಂದೆಯೇ ವ್ಯಕ್ತವಾಗಿತ್ತು. ಅದೀಗ ನಿಜವಾಗಿದೆ.
ರಾಜ್ಯದಲ್ಲಿ ಬಿಯರ್ ಬೆಲೆ 10 ರಿಂದ 20 ರೂಪಾಯಿ ಏರಿಕೆ ಮಾಡಲಾಗಿದೆ
ಸರ್ಕಾರ ಈ ಹಿಂದೆ ಬಿಯರ್ ಮೇಲೆ ಶೇ.20ರಷ್ಟು ಹೆಚ್ಚುವರಿ ಸುಂಕ ವಿಧಿಸಿತ್ತು. ಆ ನಂತರ ಉತ್ಪಾದನಾ ವೆಚ್ಚ ಸರಿದೂಗಿಸಿಕೊಳ್ಳಲು ಬಿಯರ್ ಕಂಪನಿಗಳು ಫೆಬ್ರವರಿ ತಿಂಗಳಲ್ಲಿ ಬಿಯರ್ ಬೆಲೆ 10 ರೂ.ವರೆಗೆ ಏರಿಕೆ ಮಾಡಿತ್ತು. ಈಗ ಕಂಪನಿಗಳು ಕಚ್ಚಾ ವಸ್ತುಗಳ ಬೆಲೆ ಏರಿಕೆ ಕಾರಣ ನೀಡಿ ಬಿಯರ್ ದರ ಏರಿಕೆ ಮಾಡಿವೆ. ಈ ಮೂಲಕ 15 ತಿಂಗಳ ಅಂತರದಲ್ಲಿ ಬಿಯರ್ ಬೆಲೆ ಸುಮಾರು 50 ರಿಂದ 60 ರೂ. ವರೆಗೆ ಹೆಚ್ಚಳವಾದಂತಾಗಿದೆ.
ಫೆಬ್ರವರಿ ಬಿಯರ್ ದರ ಮತ್ತೆ ಏರಿಕೆ ಕಂಡಿತ್ತು. ಇದೀಗ ಮತ್ತೆ ಬಿಯರ್ ದರ ಏರಿಕೆಗೆ ಕಂಪನಿಗಳು ತೀರ್ಮಾನ ಮಾಡಿಕೊಂಡಿವೆ. 15 ತಿಂಗಳ ಅಂತರದಲ್ಲಿ ಬಿಯರ್ ಬೆಲೆ ಸುಮಾರು ₹60 ರೂಪಾಯಿವರೆಗೆ ಹೆಚ್ಚಳವಾದಂತಾಗಿದೆ.